ಬೈಕ್ ಬಿಡಿ ಬೈಸಿಕಲ್ ಹತ್ತಿ; ಡಿಸಿ, ಎಸ್ಪಿ ಸೈಕಲ್ ಸವಾರಿ

0
Spread the love

ಬೀದರ್: ಬೈಕ್ ಬಿಟ್ಟು ಸೈಕಲ್ ಬಳಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಸ್ವತಃ ಅಧಿಕಾರಿಗಳೆ ರಸ್ತೆಗೆ ಇಳಿದಿದ್ದಾರೆ.

Advertisement

ಡಿಸಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟೆ ತಮ್ಮ ಸರಕಾರಿ ವಾಹನ ಬಿಟ್ಟು ಸೈಕಲ್ ಏರಿ ನಗರದ ತುಂಬೆಲ್ಲಾ ಸವಾರಿ ಮಾಡಿದರು. ಸರಕಾರಿ ವಾಹನ ಬಿಟ್ಟು ಸೈಕಲ್ ಏರಿದ ಅಧಿಕಾರಿಗಳ ಈ ನಡೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಕೋಟೆ ಬಳಿ ಇರುವ ಅಧಿಕಾರಿಗಳ ಮನೆಯಿಂದಲೇ
ಈ ಸೈಕಲ್ ಸವಾರಿ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ರಸ್ತೆ ಸುರಕ್ಷತಾ ಅಭಿಯಾನದ ಹಿನ್ನೆಲೆಯಲ್ಲಿ ಅಪ್ರಾಪ್ತರು, ಬೈಕ್ ಬಳಸುವ ಬದಲು ಸೈಕಲ್ ಬಳಸುವಂತೆ ಪ್ರೇರಣೆ ನೀಡಲಾಯಿತು.

ವಾರದಲ್ಲಿ ಒಂದು ದಿನ ಸೈಕಲ್‌ನಲ್ಲಿ ತಮ್ಮ ಕಚೇರಿಗೆ ತೆರಳಲು ಡಿಸಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟೆ ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.


Spread the love

LEAVE A REPLY

Please enter your comment!
Please enter your name here