ಬೆಂಗಳೂರು:ಹೈಕೋರ್ಟ್ ಆದೇಶದ ನಡುವೆಯೂ ರಸ್ತೆಗಿಳಿದ ಬೈಕ್ ಟ್ಯಾಕ್ಸಿ ವಿರುದ್ಧ ಪೊಲೀಸರು ಸಮರ ಸಾರಿದ್ದು, ಒಂದೇ ದಿನ 103 ವಾಹನಗಳನ್ನು ಸೀಜ್ ಮಾಡಿದ್ದಾರೆ.
ಆರ್‌ಟಿಓ ಅಧಿಕಾರಿಗಳು ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. 11 ಆರ್‌ಟಿಓ ವ್ಯಾಪ್ತಿಯಲ್ಲಿ ಚಲಾಯಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಲಾಗಿದೆ. ಇಂದು ಸಹ ಹಲವು ತಂಡಗಳನ್ನ ರಚಿಸಿ ಆರ್‌ಟಿಒ ಕಾರ್ಯಚರಣೆಗಿಳಿದಿದೆ.
ಕಚೇರಿ ಬೈಕ್ ಟ್ಯಾಕ್ಸಿಗಳ ಸಂಖ್ಯೆ
1.ಆರ್‌ಟಿಓ ಸೆಂಟ್ರಲ್ – 8
2.ಆರ್‌ಟಿಓ ವೆಸ್ಟ್ – 16
3.ಆರ್‌ಟಿಓ ಈಸ್ಟ್ – 12
4.ಆರ್‌ಟಿಓ ನಾರ್ತ್ – 10
5.ಆರ್‌ಟಿಓ ಸೌತ್ – 10
6.ಜ್ಞಾನಭಾರತಿ – 5
7.ದೇವನಹಳ್ಳಿ – 5
8.ಯಲಹಂಕ. – 4
9.ಎಲೆಕ್ಟ್ರಾನಿಕ್ ಸಿಟಿ – 15
10.ಕೆ.ಆರ್.ಪುರಂ – 13
11.ಚಂದಾಪುರ – 5
ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜೂ.16ರಿಂದ ಅನಧಿಕೃತ ಬೈಕ್ ಟ್ಯಾಕ್ಸಿಗಳು ಸ್ಥಗಿತಗೊಂಡಿವೆ. ಆದೇಶದ ಹೊರತಾಗಿಯೂ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಸಂಚಾರ ಮಾಡಿದೆ. ಹೀಗಾಗಿ ಪೊಲೀಸರು ಹಾಗೂ RTO ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದೆ.