ಬೆಂಗಳೂರಿನಲ್ಲಿ ಬೈಕ್​ ಕಳ್ಳತನ: 12 ಅಂತರಾಜ್ಯ ಕಳ್ಳರು ಅರೆಸ್ಟ್, 61 ಬೈಕ್ ಸೀಜ್!

0
Spread the love

ಬೆಂಗಳೂರು:- ನಗರದಲ್ಲಿ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದು ಆತಂಕಕ್ಕೀಡು ಮಾಡಿದೆ.

Advertisement

ಇದೀಗ ಕಳ್ಳತನ ಪ್ರಕರಣದಲ್ಲಿ ಸುಮಾರು 12 ಅಂತರಾಜ್ಯ ಕಳ್ಳರನ್ನು ಬೆಂಗಳೂರು ಪೊಲೀಸರು ಎಡೆಮುರಿ ಕಟ್ಟಿದ್ದಾರೆ. ಇನ್ನೂ ಆರೋಪಿಗಳಿಂದ 61 ಬೈಕ್​ಗಳನ್ನು ವಶಕ್ಕೆ​ ಪಡೆಯಲಾಗಿದೆ.

ರಾಜಧಾನಿ ಬೆಂಗಳೂರಿನ ಆರ್​.ಟಿ.ನಗರ, ಸೋಲದೇವನಹಳ್ಳಿ, ಬಾಗಲಗುಂಟೆ, ಚಿಕ್ಕಜಾಲ, ಎಲೆಕ್ಟ್ರಾನಿಕ್​ ಸಿಟಿ, ಬಾಣಸವಾಡಿ, ಕಾಡುಗೋಡಿ ಪೊಲೀಸರಿಂದ ಆರೋಪಿಗಳ ಬಂಧನ ಮಾಡಿದ್ದು, ಒಟ್ಟು 51 ಲಕ್ಷ ಮೌಲ್ಯದ 61 ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದೇವಸ್ಥಾನ, ಜಾತ್ರೆ ಮತ್ತು ನೋ ಪಾರ್ಕಿಂಗ್​​ಗಳಲ್ಲಿ ಖದೀಮರಿಂದ ಕಳ್ಳತನ ಮಾಡಲಾಗುತ್ತಿತ್ತು. ಆರೋಪಿಗಳು ಹಲವು ಮಾದರಿಯಲ್ಲಿ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದರು. ಬೈಕ್​ಗಳು ಕದ್ದಿದ್ದಲ್ಲದೇ ಅದೇ ಬೈಕ್​​ಗಳಲ್ಲಿ ಸರಗಳ್ಳತನ ಕೂಡ ಮಾಡುತ್ತಿದ್ದರು.

ಇದೇ ರೀತಿಯಾಗಿ ಆರ್​ಎಕ್ಸ್ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಇಮ್ರಾನ್​ ಮತ್ತು ಸಮೀರ್​​ನನ್ನು ಬಂಧಿಸಿದ ಆರ್​.ಟಿ.ನಗರ ಪೊಲೀಸರು ಬಂಧಿಸಿದ್ದಾರೆ. ವೆಹಿಕಲ್ ಬಿಡಿ ಭಾಗಗಳನ್ನು ಬಿಚ್ಚಿ ಓಎಲ್​ಎಕ್ಸ್ ಮೂಲಕ ಮಾರಾಟ ಮಾಡುತ್ತಿದ್ದರು. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಇನ್ನು ನಗರದಲ್ಲಿ ತಡರಾತ್ರಿ ತೆರೆದ ಮನೆಗಳನ್ನು ಟಾರ್ಗೆಟ್​​ ಮಾಡಿ ಮೊಬೈಲ್​, ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಗಲು ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಮನೆಗಳ್ಳತನ ಮಾಡ್ತಿದ್ದರು.

ಉತ್ತರಾಖಂಡ ಮೂಲದ ಜತಿನ್​​, ಮನೀಶ್​​​​ ಬಂಧಿತರು. ಕದ್ದ ಬೈಕ್​ಗಳಲ್ಲಿಯೇ ಹೋಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು. ಬಂಧಿತರಿಂದ 14 ಲಕ್ಷ ಮೌಲ್ಯದ 11 ಬೈಕ್​ಗಳು, 21 ಮೊಬೈಲ್​​ಗಳು, 21 ಗ್ರಾಂ ಚಿನ್ನಾಭರಣವನ್ನು ಎಲೆಕ್ಟ್ರಾನಿಕ್​ ಸಿಟಿ ಠಾಣೆ ಪೊಲೀಸರು ವಶಕ್ಕೆ ಪಡೆದ್ದಾರೆ.


Spread the love

LEAVE A REPLY

Please enter your comment!
Please enter your name here