ಬೆಂಗಳೂರು:- ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಪೊಲೀಸರಿಗೆ ಯಾವ ಭಯ ಇಲ್ಲದೇ ತಾವು ಆಡಿದ್ದೇ ಆಟ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಹೌದು, ಪುಂಡರು, ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ. ರಾಮಮೂರ್ತಿನಗರ, ಕೆ.ಆರ್.ಪುರಂ ಫ್ಲೈ ಓವರ್ ಮಾರ್ಗವಾಗಿ ಸಿನಿಮೀಯ ರೀತಿಯಲ್ಲಿ ಸಾಲು ಸಾಲಾಗಿ ಬೈಕ್‌ಗಳಲ್ಲಿ ಲಾಂಗ್ ಹಿಡಿದು, ವಾಹನ ಸವಾರರಿಗೆ ಭಯ ಬೀಳಿಸುತ್ತಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಹತ್ತಾರು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ರಾಜಾರೋಷವಾಗಿ ಬೈಕ್ ಚಲಾಯಿಸುತ್ತಿದ್ದಾರೆ.
ಪುಂಡರ ಗುಂಪೊಂದು ಹವಾ ಮೆಂಟೇನ್ ಮಾಡುವುದಕ್ಕೆ ಭಯಬೀಳಿಸುವಂತೆ ಕೈಯಲ್ಲಿ ಕತ್ತಿ, ಲಾಂಗು, ಡ್ರ್ಯಾಗರ್ ಹಿಡಿದು ಅಟ್ಟಹಾಸ ಮೆರೆಯುತ್ತಿದ್ದಾರೆ. ರಸ್ತೆಯಲ್ಲಿ ಬೆಂಕಿ ಬರುವಂತೆ ಕತ್ತಿ ಹಾಗೂ ಲಾಂಗ್‌ನಿಂದ ಬೀಸುತ್ತಿದ್ದು, ಪುಂಡರ ಹಾವಳಿಗೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.
ಕೂಡಲೇ ಈ ಪುಂಡರಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.



