ಬೆಂಗಳೂರು: ಬೆಂಗಳೂರಿನ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೊಲೆ ಪ್ರಕರಣದಲ್ಲಿ A5 ಆಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಪೊಲೀಸರು ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ.
Advertisement
ಇದರ ನಡುವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಸುಪಾರಿ ಕಿಲ್ಲರ್ ಅರೆಸ್ಟ್ ಮಾಡಲಾಗಿದೆ. ಮಾಲೂರಿನ ಕುಖ್ಯಾತ ರೌಡಿಶೀಟರ್ ಕಿರಣ್ ಬಂಧಿತ ಆರೋಪಿಯಾಗಿದ್ದು, ಪ್ರಕರಣದ ತನಿಖೆ ನಡೆಸ್ತಿದ್ದ ಪೊಲೀಸರಿಗೆ ಭಿಕ್ಲು ಶಿವನ ಮೇಲೆ ಮೊದಲು ಅಟ್ಯಾಕ್ ಮಾಡಿದ್ದು ಮಾಲೂರು ಕಿರಣ್ ಎಂಬ ಆರೋಪ ಕೇಳಿಬಂದಿತ್ತು.
ಹೀಗಾಗಿ ಆರೋಪಿ ಹಿಂದೆ ಬಿದ್ದ ಪುಲಕೇಶಿನಗರ ಎಸಿಪಿ ಗೀತಾ ಅಂಡ್ ಟೀಂ ನಿನ್ನೆ ತಡರಾತ್ರಿ ಆರೋಪಿಯನ್ನ ಬಂಧಿಸಿದ್ದಾರೆ. ಮಾಲೂರಿನ ತನ್ನ ಸಹಚರರು ಅರೆಸ್ಟ್ ಆಗ್ತಿದ್ದಂತೆ ಕಿರಣ್ ಎಸ್ಕೇಪ್ ಆಗಿದ್ದನು. ಸದ್ಯ ಭಿಕ್ಲಶಿವಾ ಕೊಲೆ ಕೇಸ್‌ನಲ್ಲಿ ಬಂಧಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.