ಬೆಂಗಳೂರು: ಬಿಕ್ಲು ಶಿವನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಅವನಾಶ್ ದಿನ್ನಹಳ, ಸುದರ್ಶನ್, ಮುರುಗೇಶ್ ಮತ್ತು ನರಸಿಂಹ ಎಂಬ ನಾಲ್ಕು ಮಂದಿ ಸುಪಾರಿ ಕಿಲ್ಲರ್‌ಗಳನ್ನು ಬಂಧಿಸಲಾಗಿದೆ.
ಈ ಎಲ್ಲಾ ಆರೋಪಿಗಳು ಕೋಲಾರ ಮೂಲದವರು. ಕೋಲಾರದಿಂದ ಬಂದಿದ್ದ ಐದು 5 ಮಂದಿ ನಟೋರಿಯಸ್ ಗಳಿಂದ ಹತ್ಯೆ ನಡೆದಿದೆ ಎನ್ನಲಾಗ್ತಿದೆ. ಐವರಲ್ಲಿ ನಾಲ್ಕು ಜನರನ್ನ ಬಂಧನ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಮತ್ತೊರ್ವನಿಗೆ ಶೋಧ ಕಾರ್ಯ ಮುಂದುವರೆದಿದೆ.
ಬಿಕ್ಲು ಶಿವನ ಕೊಲೆಗೆ ಬ್ಯಾಕ್ ಅಪ್ ಟೀಮ್ ಇಟ್ಟುಕೊಂಡು ಬರ್ಬರವಾಗಿ ಕೊಂದಿದ್ದಾರೆ ಎನ್ನಲಾಗ್ತಿದೆ. ಪುಲಿಕೇಶಿನಗರ ಠಾಣೆಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ. ಇತ್ತ ಜಗ್ಗನ ಜಾಮೀನು ಅರ್ಜಿ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.



