ಬೆಂಗಳೂರು:– ಬಿಕ್ಲು ಶಿವ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗಿದ್ದ ಬೈರತಿ ಬಸವರಾಜ್ ಅವರು ಸುಮಾರು ಮೂರು ಗಂಟೆ ತನಿಖೆ ಎದುರಿಸಿದ್ದಾರೆ.
ಪೊಲೀಸರ ವಿಚಾರಣೆ ಬಳಿಕ ಮಾತನಾಡಿದ ಬೈರತಿ ಬಸವರಾಜ್, ಎಸಿಪಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ನನ್ನದು ಯಾವುದೇ ಪಾತ್ರವಿಲ್ಲ. ತನಿಖೆಗೆ ಕರೆದಿದ್ದರು ಬಂದಿದ್ದೇನೆ ಅಷ್ಟೇ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ. ಏನೆಲ್ಲಾ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರಿಸಿದ್ದೇನೆ. ತಮ್ಮ ಪಾತ್ರ ಏನು ಇಲ್ಲ ಎಂದು ಎಸಿಪಿಗೆ ಹೇಳಿದ್ದೀನಿ. ಮತ್ತೆ ನೊಟೀಸ್ ಕೊಟ್ರೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ಪೊಲೀಸರು ವಿಚಾರಣೆಗೆ ಮತ್ತೆ ಬರಬೇಕು ಅಂತ ಹೇಳಿದ್ದಾರೆ. ಹೀಗಾಗಿ ಜುಲೈ 23 ಬುಧವಾರದಂದು ವಿಚಾರಣೆಗೆ ಹಾಜರಾಗಬೇಕಿದೆ. ಪುನಃ ವಿಚಾರಣೆಗೆ ಬಂದು ನನ್ನ ಅನಿಸಿಕೆ ತಿಳಿಸುತ್ತೇನೆ. ನನಗೆ ಯಾವ ಜಗದೀಶ್ ಕೂಡ ಪರಿಚಯ ಇಲ್ಲವೇ ಇಲ್ಲ. ಅವರು ಯಾರೆಂದು ಗೊತ್ತಿಲ್ಲ. ಮತ್ತೆ ವಿಚಾರಣೆಗೆ ಬರೋದಕ್ಕೆ ಹೇಳಿದ್ದಾರೆ, ಬರುತ್ತೇನೆ ಎಂದು ಹೇಳಿದ್ದಾರೆ.