ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭಾರತದ ಅಖಂಡತೆ, ಅಭ್ಯುದಯಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಭಾರತ ಮಾತೆಯ ಸುಪುತ್ರ ಪಂಡಿತ ದೀನದಯಾಳ ಉಪಾಧ್ಯಾಯರ ಚಿಂತನೆ, ಆದರ್ಶ, ಮೌಲ್ಯಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಬಿಜೆಪಿ ಮಂಡಳ ಮತ್ತು ನಗರ ಘಟಕದಿಂದ ಆಚರಿಸಲಾದ ಪಂ.ದೀನದಯಾಳ ಉಪಾದ್ಯಯರ ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಉಪಾಧ್ಯಾಯರ ಕನಸಿನಂತೆ ಇಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಸ್ವಾಭಿಮಾನಿ ಜೀವನ ಸಾಗಿಸುವಂತಾಗಬೇಕು. ಸದೃಢ ಸಶಕ್ತ ರಾಷ್ಟç ನಿರ್ಮಾಣವಾಗಬೇಕು ಎಂಬುದು ಉಪಾಧ್ಯಾಯರ ಕನಸಾಗಿತ್ತು. ಅವರ ಅದ್ಭುತವಾದ ಚಿಂತನೆ, ವಿಚಾರಧಾರೆಗಳೊಂದಿಗೆ ಯುವಕರು ದೇಶ ಕಟ್ಟುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಮಂಡಳದ ಅಧ್ಯಕ್ಷ ಸುನಿಲ್ ಮಹಾಂತಶೆಟ್ಟರ್, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಶಿವಯೋಗಿ ಅಂಕಲಕೋಟಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲ್ಲಪ್ಪ ಹಡಪದ, ಅನಿಲ ಮುಳಗುಂದ, ಗಿರೀಶ ಚೌರಡ್ಡಿ, ರುದ್ರಪ್ಪ ಉಮಚಗಿ, ವಿಜಯ ಮೆಕ್ಕಿ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಬೂದಿಹಾಳ, ನೀಲಪ್ಪ ಹತ್ತಿ, ಅಜ್ಜಪ್ಪ ಹೂಗಾರ, ಮಂಜುನಾಥ ಗಜಾಕೋಶ, ಸಂತೋಷ ಜಾವೂರ ಸೇರಿದಂತೆ ಅನೇಕರಿದ್ದರು.