ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹೋರಾಟಗಾರ, ಸಂಘಟನಾ ಚತುರನಾಗಿ, ಪಕ್ಷದ ಚುಕ್ಕಾಣಿ ಹಿಡಿದಿರುವ ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯುವಕರಿಗೆ ಆದರ್ಶರಾಗಿದ್ದು, ಯುವಶಕ್ತಿ ಅವರಿಂದ ಆಕರ್ಷಿತವಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈವಿ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ಸೋಮೇಶ್ವರ ದೇವರಿಗೆ ವಿಶೇಷ ಪೂಜೆ, ಗೋಪೂಜೆ ಹಾಗೂ ಸಸಿಗಳನ್ನು ನೆಡುವ ಮೂಲಕ ಆಚರಿಸಿ ಮಾತನಾಡಿದರು.
ವಿಜಯೇಂದ್ರ ಅವರು ಭರವಸೆಯ ನಾಯಕರಾಗಿದ್ದಾರೆ. ಅವರ ತಂದೆಯಂತೆ ರೈತರ, ಬಡವರ ಕೂಲಿಕಾರ್ಮಿಕರ, ದೀನದಲಿತರ ಪರ ಹೋರಾಟ ಮಾಡುತ್ತ ಹೊರ ಹೊಮ್ಮುತ್ತಿದ್ದು, ಯುವಕರ ಅಚ್ಚು ಮೆಚ್ಚಿನ ನಾಯಕರಾಗಿದ್ದಾರೆ. ಅವರಿಗೆ ಇನ್ನೂ ಉನ್ನತ ಹುದ್ದೆಗಳು ಲಭಿಸಲಿ ಎಂದು ಕಾರ್ಯಕರ್ತರ ಪರವಾಗಿ ಹಾರೈಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಶಿರಹಟ್ಟಿ ಮಂಡಳ ಪ್ರ.ಕಾರ್ಯದರ್ಶಿ ಅನಿಲ್ ಮುಳಗುಂದ, ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಪುರಸಭೆ ಸದಸ್ಯರಾದ ಮಹಾದೇವಪ್ಪ ಅಣ್ಣಿಗೇರಿ, ಮಂಜುಳಾ ಗುಂಜಳ, ಮಂಜನಗೌಡ್ರ ಕೆಂಚನಗೌಡ, ಗಂಗಾಧರ ಮೆಣಸಿನಕಾಯಿ, ಶಿವಯೋಗಿ ಅಂಕಲಕೋಟಿ, ಬಸವರಾಜ ಬಾಳಿಕಾಯಿ, ರಾಜಶೇಖರ ಶಿಗ್ಲಿಮಠ, ವಿಜಯ ಕುಂಬಾರ, ನಾಗರಾಜ ಬಟಗುರ್ಕಿ, ನಿಂಗಪ್ಪ ಪ್ಯಾಟಿ, ಗಿರೀಶ ಚೌರಡ್ಡಿ, ನವೀನ ಕುಂಬಾರ, ಯಶವಂತ ಭಜಂತ್ರಿ, ಅಮಿತ ಗುಡಗೇರಿ, ಪ್ರವೀಣ ಗೌರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.