ಧಾರವಾಡ: ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವನಿಗೆ ನಾಗರಹಾವು ಕಚ್ಚಿ ಸಾವನಪ್ಪಿರುವ ಘಟನೆ ಧಾರವಾಡದ ಹೆಬ್ಬಳ್ಳಿಯಲ್ಲಿ ನಡೆದಿದೆ. ಅರುಣ ಬಡಿಗೇರ (9) ಎಂಬ ಬಾಲಕನೇ ಸಾವನ್ನಪ್ಪಿರುವ ಬಾಲಕನಾಗಿದ್ದಾನೆ.
Advertisement
ಕಳೆದ ದಿನ ಮನೆಯ ಪಕ್ಕದಲ್ಲೇ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಾವು ಬಾಲಕನಿಗೆ ಹಾವು ಕಚ್ಚಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅರುಣ ಇಂದು ಅಸುನೀಗಿದ್ದಾನೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.