ಭೋಪಾಲ್: ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಹೌದು. ಮಧ್ಯಪ್ರದೇಶದಲ್ಲಿ ಮಹಿಳೆಯರು ಕೈ ಹಿಡಿದ ಪರಿಣಾಮ ಮತ್ತೆ ಅಧಿಕಾರಕ್ಕೆ ಏರಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಆರಂಭಿಸಿದ ಬೆನ್ನಲ್ಲೇ ಸಿಎಂ ಶಿವರಾಜ್ ಸಿಂಹ್ ಚೌಹಾಣ್ ಲಾಡ್ಲಿ ಬೆಹನಾ ಹೆಸರಿನ ಯೋಜನೆ ಆರಂಭಿಸಿತ್ತು.
ಕಾಂಗ್ರೆಸ್ ಇದು ಚುನಾವಣೆ ಗಿಮಿಕ್ ಎಂದು ಬಣ್ಣಿಸಿದರೆ ಮಧ್ಯಪ್ರದೇಶ ಸರ್ಕಾರ ಘೋಷಣೆ ಮಾತ್ರ ಮಾಡದೇ ಚಾಲನೆ ನೀಡಿತ್ತು. ಬಡ ಮಹಿಳೆಯರಿಗೆ ಪ್ರತಿ ತಿಂಗಳು 1,250 ರೂ. ನೀಡಿದ್ದರೆ ಪಿಎಂ ಉಜ್ವಲಾ ಯೋಜನೆ ಅಡಿ ಸಿಲಿಂಡರ್‌ಗೆ 450 ರೂ. ನೀಡುವುದಾಗಿ ಭರವಸೆ ನೀಡಿತ್ತು.
ಕರ್ನಾಟಕ ಚುನಾವಣೆಯಲ್ಲೂ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದರು. ಇದನ್ನು ಮೊದಲೇ ಗಮನಿಸಿದ್ದ ಮಧ್ಯಪ್ರದೇಶ ಸರ್ಕಾರ ಮಹಿಳಾ ಪರವಾದ ಯೋಜನೆಗಳು ಪ್ರಕಟಿಸಿದ ಪರಿಣಾಮ ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಮಧ್ಯಾಹ್ನ 12 ಗಂಟೆಯ ಟ್ರೆಂಡ್ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ 157, ಕಾಂಗ್ರೆಸ್ 70, ಇತರರು 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.