ಮತ್ತೆ ಮುಗ್ಗರಿಸಿದ ಕೈ, ಅರಳಿದ ಕಮಲ….

0
BJP candidate Basavaraj Bommai wins from Haveri Lok Sabha constituency
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : 18ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ  ಬಸವರಾಜ ಬೊಮ್ಮಾಯಿ ಅವರು 7,05,538 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ 43,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
BJP candidate Basavaraj Bommai wins from Haveri Lok Sabha constituency
ಆನಂದಸ್ವಾಮಿ ಗಡ್ಡದೇವರಮಠ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) 6,62,025 ಮತಗಳು, ಖಾಜಾಮೋಹಿದ್ದೀನ್ ಗುಡಗೇರಿ (ಸೋಸಿಯಾಲಿಸ್ಟ್ ಪಾರ್ಟಿ(ಇಂಡಿಯಾ)) 3,401 ಮತಗಳು, ಗಂಗಾಧರ ಬಡಿಗೇರ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್) 2,270 ಮತಗಳು, ತನು ಚಿಕ್ಕಣ್ಣ ಯಾದವ್ (ಕರ್ನಾಟಕ ರಾಷ್ಟç ಸಮಿತಿ) 636 ಮತಗಳು, ಹೆಚ್.ಕೆ. ನರಸಿಂಹಪ್ಪ (ಸಮಾಜವಾದಿ ಜನತಾ ಪಾರ್ಟಿ-ಕರ್ನಾಟಕ) 446 ಮತಗಳು, ಶ್ರೀಮತಿ ರಶೀದ ಬೇಗಂ (ಇಂಡಿಯನ್ ಮೂಮೆಂಟ್ ಪಾರ್ಟಿ) 397 ಮತಗಳು, ವಿಶ್ವನಾಥ ಶೀರಿ (ಏಕಂ ಸನಾತನ ಭಾರತ ದಳ) 401 ಮತಗಳು, ಪ್ರಜಾಕೀಯ ಸಚಿನಕುಮಾರ ಕರ್ಜೆಕಣ್ಣನವರ (ಉತ್ತಮ ಪ್ರಜಾಕೀಯ ಪಾರ್ಟಿ) 1,072 ಮತಗಳು, ಡಾ.ಗುರಪ್ಪ ಹೆಚ್. ಇಮ್ರಾಪೂರ(ಪಕ್ಷೇತರ) 953 ಮತಗಳು, ಜಗದೀಶ ಯಲ್ಲಪ್ಪ ಬಂಕಾಪೂರ (ಪಕ್ಷೇತರ) 674 ಮತಗಳು, ಬಸವರಾಜ ಹಾದಿ (ಪಕ್ಷೇತರ) 1,071 ಮತಗಳು, ರುದ್ರಪ್ಪ ಕುಂಬಾರ (ಪಕ್ಷೇತರ) 1,356 ಹಾಗೂ ಶ್ರೀಮತಿ ಸುನಂದಾ ಕರಿಯಪ್ಪ ಶಿರಹಟ್ಟಿ (ಪಕ್ಷೇತರ) ಅವರು  4,707  ಮತಗಳನ್ನು ಪಡೆದಿದ್ದಾರೆ ಹಾಗೂ ನೋಟಾಕ್ಕೆ 10,865 ಮತಗಳು ಚಲಾವಣೆಯಾಗಿವೆ.
ಅಂಚೆ ಮತದಾನದ ಅಭ್ಯರ್ಥಿವಾರು ವಿವರದಂತೆ ಆನಂದಸ್ವಾಮಿ ಗಡ್ಡದೇವರಮಠ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್)  1,834 ಮತಗಳು, ಬಸವರಾಜ ಬೊಮ್ಮಾಯಿ (ಭಾರತೀಯ ಜನತಾ ಪಾರ್ಟಿ)3,347 ಮತಗಳು, ಖಾಜಾಮೋಹಿದ್ದೀನ್ ಗುಡಗೇರಿ (ಸೋಸಿಯಾಲಿಸ್ಟ್ ಪಾರ್ಟಿ-ಇಂಡಿಯಾ) 3 ಮತಗಳು, ಗಂಗಾಧರ ಬಡಿಗೇರ(ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)) 06 ಮತಗಳು, ತನು ಚಿಕ್ಕಣ್ಣ ಯಾದವ್ (ಕರ್ನಾಟಕ ರಾಷ್ಟç ಸಮಿತಿ) 8 ಮತಗಳು, ಹೆಚ್.ಕೆ. ನರಸಿಂಹಪ್ಪ (ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ)1, ಶ್ರೀಮತಿ ರಶೀದ ಬೇಗಂ, (ಇಂಡಿಯನ್ ಮೂಮೆಂಟ್ ಪಾರ್ಟಿ) 01, ಸಚಿನಕುಮಾರ ಕರ್ಜೆಕಣ್ಣನವರ (ಉತ್ತಮ ಪ್ರಜಾಕೀಯ ಪಾರ್ಟಿ) 14 ಮತಗಳು, ಡಾ.ಗುರಪ್ಪ ಹೆಚ್. ಇಮ್ರಾಪೂರ(ಪಕ್ಷೇತರ) 23 ಮತಗಳು, ಜಗದೀಶ ಯಲ್ಲಪ್ಪ ಬಂಕಾಪೂರ (ಪಕ್ಷೇತರ) 14 ಮತಗಳು, ಬಸವರಾಜ ಹಾದಿ (ಪಕ್ಷೇತರ) 06 ಮತಗಳು, ರುದ್ರಪ್ಪ ಕುಂಬಾರ (ಪಕ್ಷೇತರ) 04 ಮತಗಳು ಹಾಗೂ ಶ್ರೀಮತಿ ಸುನಂದಾ ಕರಿಯಪ್ಪ ಶಿರಹಟ್ಟಿ (ಪಕ್ಷೇತರ) ಅವರು 02 ಅಂಚೆ ಮತಗಳನ್ನು ಪಡೆದಿದ್ದಾರೆ.
686 ಮತ ತಿರಸ್ಕೃತ
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಅಂಚೆ ಮತದಾನದ ಪೈಕಿ 686 ಮತಗಳು ತಿರಸ್ಕೃತಗೊಂಡಿವೆ. ನೋಟಾಕ್ಕೆ ಮೂರನೇ ಸ್ಥಾನ ಲಭಿಸಿದೆ. ಪಕ್ಷೇತರ ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತದಾನವಾಗಿದೆ.  
ಹಾವೇರಿ ಕ್ಷೇತ್ರದಲ್ಲಿ 5,985 ಅಂಚೆ ಮತದಾನ ಚಲಾವಣೆಗೊಂಡಿವೆ. ಈ ಪೈಕಿ 686 ಮತಗಳು ತಿರಸ್ಕೃತಗೊಂಡಿವೆ. 5,299 ಮತಗಳು ಸ್ವೀಕೃತವಾಗಿವೆ. 34 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ.

Spread the love
Advertisement

LEAVE A REPLY

Please enter your comment!
Please enter your name here