HomeGadag Newsರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಪ್ರತಿಭಟನೆ ನಡೆಸುತ್ತ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಂಡು, ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯಪಾಲರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ವಿರುದ್ಧ ಮುಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರಾದ ಐವಾನ್ ಡಿಸೋಜ ಮಂಗಳೂರಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಪಕ್ಷದ ಹಿರಿಯರಾದ ಎಂ.ಎಸ್. ಕರಿಗೌಡ್ರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ವಿಜಯಕುಮಾರ ಗಡ್ಡಿ, ಶ್ರೀಪತಿ ಉಡುಪಿ, ಸಿದ್ದು ಪಲ್ಲೇದ, ಎಂ.ಎಂ. ಹಿರೇಮಠ, ಬಿ.ಎಸ್. ಚಿಂಚಲಿ, ಸಂತೋಷ ಅಕ್ಕಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಚಂದ್ರು ತಡಸದ, ಶಿವಕುಮಾರ ನೀಲಗುಂದ, ಅಶೋಕ ಕರೂರ, ಲಕ್ಷ್ಮಣ ದೊಡ್ಮನಿ, ಬೂದಪ್ಪ ಹಳ್ಳಿ, ಅಶ್ವಿನಿ ಜಗತಾಪ್, ನಿರ್ಮಲಾ ಕೊಳ್ಳಿ, ಲಕ್ಷ್ಮಿ ಕಾಕಿ, ವಿದ್ಯಾವತಿ ಗಡಗಿ, ಸ್ವಾತಿ ಅಕ್ಕಿ, ವಂದನಾ ವರ್ಣೇಕರ್, ಶಂಕರ ಕಾಕಿ, ಅಮರನಾಥ ಗಡಗಿ, ನಾಗರಾಜ ತಳವಾರ, ವಾಯ್.ಪಿ. ಅಡ್ನೂರ, ಮಹದೇವಪ್ಪ ಚಿಂಚಲಿ, ನಾಗರಾಜ ಕುಲಕರ್ಣಿ, ಮಹೇಶ ದಾಸರ, ರೇಖಾ ಬಂಗಾರಶೆಟ್ಟರ, ಯೋಗೇಶ್ವರಿ ಭಾವಿಕಟ್ಟಿ, ಜಯಶ್ರೀ ಅಣ್ಣಿಗೇರಿ, ಕಮಲಾಕ್ಷಿ ಗೊಂದಿ, ಶಶಿಧರ ದಿಂಡೂರ, ರಮೇಶ ಸಜ್ಜಗಾರ, ಶಿವು ಹಿರೇಮನಿಪಾಟೀಲ, ಮಂಜುನಾಥ ಶಾಂತಗೇರಿ, ಶರಣ ಪಾಟೀಲ, ಸುರೇಶ ಚಿತ್ತರಗಿ, ಈರ್ಷಾದ ಮಾನ್ವಿ, ಸುರೇಶ ಗುರಮ್ಮನವರ, ಮಾಂತೇಶ ಬಾತಾಖಾನಿ, ಗಂಗಾಧರ ಹಬೀಬ, ನವೀನ ಕೊಟೆಕಲ್, ಕಿರಣ ಕಲಾಲ, ಮುತ್ತಣ್ಣ ಮೂಲಿಮನಿ, ರಾಜು ಹೊಂಗಲ, ಕಾರ್ತಿಕ ಮುತ್ತಿನಪೆಂಡಿಮಠ, ಗಂಗಾಧರ ಮೇಲಗಿರಿ, ಅವಿನಾಶ, ಕಾರ್ತಿಕ ಶಿಗ್ಲಿಮಠ, ದೇವಪ್ಪ ಹೂಗಾರ, ಅಪ್ಪಣ್ಣ ಟೆಂಗಿನಕಾಯಿ, ಶಂಕರ ಕರಿಬಿಷ್ಟಿ, ಪ್ರಕಾಶ ಅಂಗಡಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ತಮ್ಮ ಕಾರ್ಯಕರ್ತರಿಗೆ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ರಾಜ್ಯ ಸಚಿವ ಸಂಪುಟ ಸದಸ್ಯರಾದ ಜಮೀರಅಹ್ಮದ ಕೂಡ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!