ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಅವರ ಸೂಚನೆಯಂತೆ ಬಿಜೆಪಿ ಗದಗ ಜಿಲ್ಲೆಯ ಗದಗ ವಿಧಾನಸಭಾ ಕ್ಷೇತ್ರದ ಗದಗ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಯಲಿಶಿರೂರ ಗ್ರಾಮದ ಸುಭಾಸ ಸುಂಕದ, ಬೆಳದಡಿ ಗ್ರಾಮದ ಮಂಜುನಾಥ ಹಳ್ಳೂರಮಠ ಇವರನ್ನು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement


