ಹುಬ್ಬಳ್ಳಿ: ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ನವರು 40% ಕಮೀಷನ್ ಸರಕಾರ ಅಂತಾ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರದವರು ಡಬಲ್ ಕಮೀಷನ್ ಪಡೆಯುತ್ತಿದ್ದಾರೆಂದು ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇವರು ಚುನಾವಣಾ ವೇಳೆ ಜನರಿಗೆ ಒಳ್ಳೆಯ ಸರಕಾರ ಕೊಡುತ್ತೇವೆ, ಯಾವುದೇ ಭ್ರಷ್ಟಾಚಾರ ಮಾಡಲ್ಲ ಅಂತಾ ಹೇಳಿದ್ದರು. ಗುತ್ತಿಗೆದಾರರಿಂದ ಯಾವುದೇ ಕಮೀಷನ್ ಪಡೆಯದೇ ಬಿಲ್ ಪಾವತಿ ಭರವಸೆ ನೀಡಿದ್ದರು.
ಸಧ್ಯೆ ಕಮೀಷನ್ ತಮ್ಮ ಸರ್ಕಾರದಲ್ಲಿ ಡಬಲ್ ಆಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿದ್ದಾರೆ. ಇದಕ್ಕಾಗಿ ಸಿದ್ದರಾಮಯ್ಯ ತಾವು ಭ್ರಮೆಯಲ್ಲಿ ಅದಿರಿ, ಆಡಳಿತ ಸಂಪೂರ್ಣ ಹದಗೆಟ್ಟಿದೆ.
ಹೊಸದಾಗಿ ಗುತ್ತಿಗೆದಾರರು ಕೆಲಸ ತೆಗೆದುಕೊಳ್ಳುತ್ತಿಲ್ಲ, ನಮಗೆ ಬಿಲ್ ಆಗಿಲ್ಲ ಯಾವುದೇ ಕೆಲಸ ಮಾಡ್ತಾ ಇಲ್ಲ ಅಂತಾ ಹೇಳ್ತಿದ್ದಾರೆ. ಯಾವುದೇ ಟೆಂಡರ್ ಹಾಕಿದರೆ ಮೊದಲು ಕಮೀಷನ್ ಕೊಡಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ರಾಜ್ಯ ಸರ್ಕಾರದ ಮೇಲೆ ಶೆಟ್ಟರ್ ಆರೋಪ ಮಾಡಿದರು.