ವಿಜಯಸಾಕ್ಷಿ ಸುದ್ದಿ, ಗದಗ : ರೈತರು ನಮ್ಮ ದೇಶದ ಪ್ರಗತಿಗೆ ಬೆನ್ನೆಲುಬು. ಜಾಗತಿಕ ಬೆಲೆ ಏರಿಕೆಯ ನಡುವೆಯೂ ಕೃಷಿ ಉತ್ತೇಜನಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರಣದಿಂದ ರೈತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಅಮೂಲ್ಯ ಮತ ನೀಡಿ ಎಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮವನಿ ಮಾಡಿದ್ದಾರೆ.
ಕಳೆದ ಹತ್ತು ವರ್ಷದಲ್ಲಿ ದೇಶದ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗಿದೆ. ದೇಶದ ಜನರ ಯೋಚನಾ ದೃಷ್ಟಿಯೂ ಬದಲಾಗಿದೆ. ಭಾರತದ ಯುವಕರು 2047ರ ಹೊತ್ತಿಗೆ ವಿಕಸಿತ ಭಾರತದ ನಿರ್ಮಾಣದ ಕನಸನ್ನು ಕಾಣುತ್ತಿದ್ದಾರೆ. ಆತ್ಮನಿರ್ಭರ ಭಾರತದ ಯೋಜನೆಯೊಂದಿಗೆ ಆ ಗುರಿ ತಲುಪುವುದು ಕಷ್ಟಸಾಧ್ಯವಲ್ಲ. ಈ ಕನಸುಗಳು ನನಸಾಗಲು ಯುವ ಜನತೆ ಸೇರಿ ಕುಟುಂಬದ ಎಲ್ಲ ಸದಸ್ಯರು ಬಿಜೆಪಿಗೆ ಮತ ಹಾಕಿಸಿ ಗೆಲ್ಲಿಸಬೇಕು.
ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದ ಭಾರತದ ಜನತೆಗೆ ನಮ್ಮ ಸರಕಾರದ ಯೋಜನಾಬದ್ಧ ನೀತಿಯ ಕಾರಣ ಸೂರು, ಅಡುಗೆ ಅನಿಲ, ವಿದ್ಯುತ್, ಶೌಚಾಲಯ, ಬ್ಯಾಂಕ್ ಖಾತೆ, ನೀರು ಮುಂತಾದ ಸೌಲಭ್ಯಗಳು ಸಿಕ್ಕಿವೆ. ಈ ಕಾಲದ ಹೊಸ ತಂತ್ರಜ್ಞಾನದ ಸೌಲಭ್ಯಗಳೂ ಅವರಿಗೆ ದಕ್ಕಿದೆ. ದೇಶ ಸಾಧಿಸಿದ ಈ ಅಭೂತಪೂರ್ವ ಸಾಧನೆಯಿಂದಾಗಿ ದೇಶದ ಮಹಿಳೆಯರು, ರೈತರು, ಮೀನುಗಾರರು, ಬೀದಿ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು. ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಬದಲಾವಣೆ ಇನ್ನೂ ಮುಂದೆ ಸಾಗಬೇಕಿದ್ದು, ಅದಕ್ಕಾಗಿ ನಾವೆಲ್ಲರೂ ಶ್ರಮಿಸೋಣ ಎಂದಿದ್ದಾರೆ.