ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪ್ರಮುಖ ಕಡತಗಳೇ ಕಳುವಾಗಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಇದರಲ್ಲಿ ಬಿಜೆಪಿಯರು ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದು, ನಮ್ಮವರೂ ಇದ್ದಾರೆಂಬ ಸಂಶಯವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರಮುಖ ಕಡತ ಕಳವು ವಿಚಾರಕ್ಕೆ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದು, ಮೇಯರ್ ಅವರು ಸಹಿ ಮಾಡಿರುವ ಕಡತಗಳೇ ಕಾಣೆಯಾಗಿವೆ. ಮಿಸ್ಸಿಂಗ್ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆಯುಕ್ತರಿಗೆ ಹೇಳಿದ್ದೇನೆ ಎಂದು ಹೇಳಿದರು.
ದೂರು ನೀಡುವ ವಿಚಾರ ಬಗ್ಗೆ ಚರ್ಚೆಯಾಗುತ್ತಿದೆ. ಅದು ಆಯುಕ್ತರ ಜವಾಬ್ದಾರಿಯೂ ಹೌದು. ಕಡತಗಳು ಕಾರ್ಯದರ್ಶಿಗಳ ಬಳಿ ಇರಬೇಕಿತ್ತು. ಆದರೀಗ ಮೇಯರ್ ಸಹಿ ಮಾಡಿರುವ ಒರಿಜಿನಲ್ ಪ್ರತಿಗಳೇ ಕಳವು ಆಗಿದೆ.
ಅದೇ ವಿಚಾರ ಇಟ್ಟುಕೊಂಡು ಬಿಜೆಪಿಯವರು ಆಯುಕ್ತರ ವಿರುದ್ಧ ಆರೋಪ ಮಾಡ್ತಿದ್ದಾರೆ. ಮೊದಲು ತಾವೇ ಸಹಿ ಮಾಡಿದ್ದ ಮಾಡಿರುವುದಾಗಿ ಹೇಳಿದ್ದ ಆಯುಕ್ತರು ಈಗ ಅವರೇ ನಮ್ಮನ್ನು ದೂರುತ್ತಿದ್ದಾರೆ. ಹಾಗಾಗಿ ನಮ್ಮವರೂ ಸಹ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯ ಬರುತ್ತಿದೆ. ಆದ್ದರಿಂದ ದೂರು ನೀಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.