ತುಮಕೂರು: ಸರ್ಕಾರದ ವಿರುದ್ಧ ಬಿಜೆಪಿಯಿಂದ ಎರಡು ಪ್ರಮುಖ ಹೋರಾಟ ಕೈಗೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳೀದ್ದಾರೆ. ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀಗಳ 118ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು,
ರಾಜ್ಯ ಸರ್ಕಾರದ ನೀತಿ ಖಂಡಿಸಿ, ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. ಹಾಲು, ಪೆಟ್ರೋಲ್ ನೀರು ವಿದ್ಯುತ್ ದರ ಜಾಸ್ತಿ ಆಗಿದೆ. ಜನ ಸಾಮಾನ್ಯರಿಗೆ ಬರೆ ಎಳೆದಿದ್ದಾರೆ. ಬೆಲೆ ಏರಿಕೆ ಕುರಿತು ಅಹೋರಾತ್ರಿ ಧರಣಿ ನಡೆಯಲಿದೆ.
ಎರಡನೇ ಹಂತದ ಹೋರಾಟ ಮುಸ್ಲಿಂರಿಗೆ ಕೊಟ್ಟ ಮೀಸಲಾತಿ ವಿರುದ್ಧ ಹಾಗೂ ಎಸ್ಸಿ ಎಸ್ಟಿ ಹಣ ದುರುಪಯೋಗ ಮಾಡಿದುರ ಕುರಿತು ನಡೆಯಲಿದೆ. ಏಪ್ರಿಲ್ 7 ರಿಂದ ಮೈಸೂರಿನ ಚಾಮುಂಡಿ ದೇವಿಯ ಆಶೀರ್ವಾದ ಪಡೆದು ಯಾತ್ರೆ ಆರಂಭ. ಮೈಸೂರಿನಿಂದ ಜನ ಆಕ್ರೋಶ ಯಾತ್ರೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.