ಹರಿಯಾಣದಲ್ಲಿ 3ನೇ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ: ಸಂತಸ ವ್ಯಕ್ತಪಡಿಸಿದ ಮೋದಿ!

0
Spread the love

ನವದೆಹಲಿ:- ಬಿಜೆಪಿಗೆ ಸತತ 3ನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ಇತಿಹಾಸ ಬರೆದಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಮೋದಿ, ಹರಿಯಾಣದ ಜನರು ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಕಮಲ್ ಕಮಲ್ ಮಾಡಿದ್ದಾರೆ. ಇಂದು ನವರಾತ್ರಿಯ ನಾಲ್ಕನೇ ದಿನ. ತಾಯಿ ಕಾತ್ಯಾಯಿನಿ ಆರಾಧ್ಯನೆಯ ದಿನ. ಕ್ಯಾತಯಿನಿ ದೇವಿ ಕೈಯಲ್ಲಿ ಕಮಲದ ಹೂವಿದೆ. ಇಂತಹ ಪಾವನ ದಿನದಂದು ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಪಕ್ಷ ಬಂದಿದೆ.

ಗೀತಾದ ನೆಲದಲ್ಲಿ ವಿಕಾಸ‌ದ ಗೆಲವು ಬಂದಿದೆ. ಎಲ್ಲ ಜಾತಿ ವರ್ಗದ ಜನರು ನಮಗೆ ಮತ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಇದು ಭಾರತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.

ಜಮ್ಮು ಕಾಶ್ಮೀರ ಜನರು ಎನ್‌ಸಿ ಒಕ್ಕೂಟಕ್ಕೆ ಹೆಚ್ಚು ಸ್ಥಾನ ನೀಡಿದ್ದಾರೆ. ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಷ್ಟು ಪಕ್ಷಗಳು ಚುನಾವಣಾ ಅಖಾಡದಲ್ಲಿದ್ದವು, ಅದರಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿದೆ. ಅಲ್ಲಿ ಗೆಲವು ಸಾಧಿಸಿದ ಜನರಿಗೆ ಅಭಿನಂದನೆ ಹೇಳುತ್ತೇನೆ. ಎರಡು ರಾಜ್ಯದ ನಮ್ಮ ಕಾರ್ಯಕರ್ತರಿಗೆ ಧನ್ಯವಾದ ಹೇಳ್ತೀವಿ. ಇದು ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ನಡ್ಡಾ ಅವರ ತಂಡದ ಗೆಲುವಾಗಿದೆ. ನಮ್ಮ ಸಿಎಂ ಕರ್ತವ್ಯದ ಜಯವಾಗಿದೆ ಎಂದು ಹೊಗಳಿದ್ದಾರೆ.

ಸುಳ್ಳಿನ ರಾಶಿಯ ಮೇಲೆ ಅಭಿವೃದ್ಧಿ ಗ್ಯಾರಂಟಿ ಹೊರೆಯಾಯಿತು. ಹರಿಯಾಣ ಜನರು ಹೊಸ ಇತಿಹಾಸ ರಚಿಸಿದ್ದಾರೆ. 1966 ರಿಂದ ಸತತ ಮೂರನೇ ಬಾರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ದೊಡ್ಡ ದೊಡ್ಡ ಪಕ್ಷಗಳು ಆಡಳಿತ ನಡೆಸಿವೆ. ಇದು ಯಾರಿಗೂ ಸಾಧ್ಯವಾಗಲಿಲ್ಲ. ಹರಿಯಾಣದ ಜನರು ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಾರೆ. ಈ ಬಾರಿ ಹರಿಯಾಣದ ಜನರು ಮಾಡಿರುವುದು ಅಭೂತಪೂರ್ವವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here