ಬಿಜೆಪಿ ಸದಾ ಅಧಿಕಾರ ಬಯಸುವ ಪಕ್ಷ, ಇಡೀ ದೇಶಕ್ಕೆ ರಾಹುಲ್ ಗಾಂಧಿ ಬೇಕು: ಸಿದ್ದರಾಮಯ್ಯ!

0
Spread the love

ಬೆಂಗಳೂರು:- ಬಿಜೆಪಿ ಸದಾ ಅಧಿಕಾರ ಬಯಸುವ ಪಕ್ಷ, ಇಡೀ ದೇಶಕ್ಕೆ ರಾಹುಲ್ ಗಾಂಧಿ ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಬಿಜೆಪಿಯ ಬ್ರ‍್ಯಾಂಚ್ ಆಫೀಸ್. ಬಿಜೆಪಿಯ ಮಾತನ್ನು ಕೇಳುವವರೇ ಆಯೋಗದಲ್ಲಿದ್ದಾರೆ. ಇಡೀ ದೇಶದಲ್ಲಿ ರಾಹುಲ್ ಗಾಂಧಿ ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡ್ತಾರೆ. ಬಿಜೆಪಿ ಸದಾ ಅಧಿಕಾರ ಬಯಸುವ ಪಕ್ಷ. ತನಿಖಾ ಸಂಸ್ಥೆಗಳ ಒಬಿಸಿ, ದಲಿತರನ್ನು ಹೆದರಿಸಿ ಬೆದರಿಸಿ ಅಧಿಕಾರ ಪಡೆಯುತ್ತಿದೆ ಎಂದು ದೂರಿದರು.

ಸಂವಿಧಾನ ಉಳಿಯಲು ಇವರು ಮುಂದುವರೆಯಬಾರದು. ಸಂವಿಧಾನದ ರಕ್ಷಣೆಯಲ್ಲಿ ನಮ್ಮೆಲ್ಲರ ರಕ್ಷಣೆ ಇದೆ. ಅಸಮಾನತೆಯನ್ನು ತಡೆದು ಹಾಕುವರೆಗೂ ದೇಶದಲ್ಲಿ ಶಾಂತಿ, ನ್ಯಾಯ, ನೆಮ್ಮದಿ ನೆಲೆಸಲ್ಲ.

ಸಾಮಾಜಿಕ ನ್ಯಾಯದಲ್ಲಿ, ಭಾತೃತ್ವದಲ್ಲಿ, ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇರುವರು ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಇರುತ್ತದೆ. ಕಾಂಗ್ರೆಸ್, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಸಿಗಲು ಸಾಧ್ಯ. ಇಡೀ ದೇಶ ರಾಹುಲ್ ಗಾಂಧಿ ನಾಯಕತ್ವ ಬೇಕು ಎಂದು ಬಯಸುತ್ತಿದೆ ಎಂದು ಸಿಎಂ ಹೇಳಿದರು.


Spread the love

LEAVE A REPLY

Please enter your comment!
Please enter your name here