ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರಜೆಗಳ ಹಕ್ಕಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದು ದೇಶಾದ್ಯಂತ ಮತಗಳ್ಳತನ ಮಾಡುವ ಮೂಲಕ ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋಸ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ವಿಶ್ವನಾಥ ಪಾಟೀಲ ಹೇಳಿದರು.
ಡಂಬಳ ಗ್ರಾಮದ ಹೆಮರಡ್ಡಿ ಮಲ್ಲಮ್ಮ ಬಡಾವಣೆಯಲ್ಲಿ ಕಾಂಗ್ರೆಸ್ ಘಟಕದಿಂದ ಸೋಮವಾರ ರಾತ್ರಿ ಜರುಗಿದ `ವೋಟ್ ಚೋರ್ ಗದ್ದಿ-ಚೋಡ್’ ಕಾರ್ಯಕ್ರಮದ ಭಾಗವಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖಂಡರಾದ ಮರಿಯಪ್ಪ ಸಿದ್ದಣ್ಣವರ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ ಮಾತನಾಡಿ, ಬಿಜೆಪಿ ಪಕ್ಷದ ಎನ್‌ಡಿಎ ನೇತೃತ್ವದ ನಡೆಯಿಂದ ದೇಶದಲ್ಲಿ ದಿನೇ ದಿನೇ ಜನಾಕ್ರೋಶ ಭುಗಿಲೇಳುತ್ತಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರ ಆದೇಶದ ಮೇರೆಗೆ ಮತ್ತು ಗದಗ ಜಿಲ್ಲಾ ಅಧ್ಯಕ್ಷರು ಮತ್ತು ಶಾಸಕರಾದ ಜಿ.ಎಸ್. ಪಾಟೀಲರ ನೇತೃತ್ವದಲ್ಲಿ ಜನರಿಂದ ಸಹಿ ಸಂಗ್ರಹ ಅಭಿಯಾನದ ಮೂಲಕ ಬಿಜೆಪಿಯ ನೈಜ ಮುಖವನ್ನು ಜನರಿಗೆ ತಲುಪಿಸುವ ಕಾರ್ಯ ಆಗುತ್ತಿದೆ. ಇನ್ನು ಮುಂದಾದರೂ ಬಿಜೆಪಿಗರು ಇಂತಹ ಕಳ್ಳಾಟ ನಿಲ್ಲಿಸಬೇಕು, ಜನರು ಬುದ್ಧಿವಂತರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶರಣು ಬಂಡಿಹಾಳ, ಮುಖಂಡರಾದ ಮಹೇಶ್ ಗಡಗಿ, ಸಣ್ಣ ಹನುಮಪ್ಪ ಬಂಡಿ, ರಾಮಣ್ಣ ಪೂಜಾರ, ಅಶೋಕ ಹಡಪದ, ಮಲ್ಲಿಕಾರ್ಜುನ್ ಪ್ಯಾಟಿ, ಮುತ್ತಣ್ಣ ಕೊಂತಿಕಲ, ಎಮ್.ಬಿ. ಗೌಡರ, ನಾಗೇಶ್ ಧರ್ಮಾಧಿಕಾರಿ, ಕುಬೇರಪ್ಪ ಕೊಳ್ಳಾರ, ಮಾರುತಿ ಹೊಂಬಳ, ಬಾಬುಸಾಬ ಮೂಲಿಮನಿ, ಪೀರಸಾಬ ಹೊಸಪೇಟಿ, ಶಂಕ್ರಪ್ಪ ಗಡಗಿ, ವೆಂಕಣ್ಣ ಗಡಿಗಿ, ಸುರೇಶ ಗಡಗಿ, ನೂರಮ್ಮದ ಸರಕಾವಾಸ, ಮಹೇಶ್ ಬಿಸ್ನಳ್ಳಿ, ಸಿದ್ದು ಮೇಟಿ, ಬಸುರಾಜ ಶಿರೋಳ, ಮಳಸಿದ್ದಪ್ಪ ವಂಟಲಭೋವಿ, ಫಕಿರಪ್ಪ ಆದಮ್ಮನವರ, ದುರಗಪ್ಪ ಮಾದರ, ಮಹೇಶ್ ಗುಡ್ಡದ, ನಾಗರಾಜ ಗಡಗಿ ಮುಂತಾದವರು ಇದ್ದರು.
ಡಾ. ಬಿ.ಆರ್. ಅಂಬೇಡ್ಕರ ಅವರು ದೇಶಕ್ಕೆ ಕೊಟ್ಟ ದೊಡ್ಡ ಶಕ್ತಿ ಮತದಾನ. ಆದರೆ ಜನರು ತಮ್ಮನ್ನು ಧಿಕ್ಕರಿಸುತ್ತಾರೆ ಎಂಬ ಭಯದಿಂದ ಮತಗಳ್ಳತನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮೋಸ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ವಿಶ್ವನಾಥ ಪಾಟೀಲ ಆರೋಪಿಸಿದರು.