ಬೆಂಗಳೂರು: ಬಿಜೆಪಿಯವರು ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಅದರಿಂದ ಮೋದಿ ಸರ್ಕಾರಕ್ಕೆ ಪದೇ ಪದೆ ಮುಜುಗರವಾಗುತ್ತಿದೆ. ಬಿ
ಜೆಪಿಯವರು ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿ ಒಂದು ಎಸ್ಒಪಿ ಮಾಡಿದೆ. ಮೊದಲು ಸಿಬಿಐ ಕಳಿಸುತ್ತಾರೆ. ಐಟಿ ಕಳಿಸುತ್ತಾರೆ. ಬಳಿಕ ಇ.ಡಿ ಕಳಿಸುತ್ತಾರೆ. ಇದಾದ ಬಳಿಕ ಆಗಿಲ್ಲ ಅಂದರೆ ರಾಜ್ಯಪಾಲರ ಕಚೇರಿ ಬಳಸುತ್ತಾರೆ. ಬಿಜೆಪಿಯವರ ವಿಧಾನ ಬ್ಲ್ಯಾಕ್ ಮೇಲ್. ಖಾಸಗಿ ಕಂಪನಿಗಳನ್ನು ಹಾಗೂ ವಿಪಕ್ಷಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಹೇಳಿದರು.
ಇನ್ನೂ ಮುನಿರತ್ನ ಬಗ್ಗೆ ಏಕೆ ಮಾತನಾಡುತ್ತಿಲ್ಲ?. ನಿಮಗೆ ಏಕೆ ಮುನಿರತ್ನ ಕಂಡರೇ ಭಯ?. ಅವರನ್ನು ಪಕ್ಷದಿಂದ ವಜಾ ಮಾಡಿ ಮೊದಲು. ಮೊದಲು ನಿಮ್ಮದು ಸರಿ ಮಾಡಿ. ರಾಜ್ಯಪಾಲರಿಂದ ಆಟ ಆಡಿಸುತ್ತಿದ್ದೀರ. ನಾವು ಎಲ್ಲವನ್ನೂ ಎದುರಿಸುತ್ತೇವೆ. ನಮ್ಮನ್ನು ಹೆದರಿಸುವುದಕ್ಕೆ ಹೋಗಬೇಡಿ. ನಾವು ಹೆದರಲ್ಲ. ನಿಮ್ಮ ಮನೆಯನ್ನು ಸರಿಪಡಿಸಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.