ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಇರುವುದು ಬಿಜೆಪಿ ಪಕ್ಷ ಒಂದೇ: ಪ್ರಮೋದ್ ಮುತಾಲಿಕ್

0
Spread the love

ಹುಬ್ಬಳ್ಳಿ: ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಇರುವುದು ಬಿಜೆಪಿ ಪಕ್ಷ ಒಂದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಇರೋದು ಮುಸ್ಲಿಮರ ರಕ್ಷಣೆಗಾಗಿ, ಅವರ ವೋಟ್‌ಗಾಗಿ ಜೊಲ್ಲು ಸುರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Advertisement

ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಇರುವುದು ಬಿಜೆಪಿ ಪಕ್ಷ ಒಂದೆ. ಆದರೆ ಕರ್ನಾಟಕದಲ್ಲಿ ಹಿಂದುತ್ವ, ಹಿಂದೂ ಸಂಘಟನೆಗಳನ್ನು ಸರಿಯಾಗಿ ಗಮನಿಸಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ವಾಪಸಾತಿ ಮಾಡಿಲ್ಲ. ಬಿಜೆಪಿ ಆಡಳಿತದಲ್ಲೇ ಹಿಂದೂ ಸಂಘಟನೆ ಮುಖ್ಯಸ್ಥರ ಕೊಲೆಯಾಯಿತು.

ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿ ನೆಲಕ್ಕೆ ಬಿದ್ದಿದೆ. ಯತ್ನಾಳ್ ಅವರು ಹಿಂದೂ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಯನ್ನೇ ಪ್ರಬಲ ಹಿಂದೂಪಕ್ಷ ಮಾಡೋದು ಒಳ್ಳೆಯದು. ಯತ್ನಾಳ್‌ರನ್ನು ವಾಪಸಾತಿ ಮಾಡಲೇಬೇಕು. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ರಹಿತ, ವಂಶದ ರಹಿತ ಆಡಳಿತ ನಡೆಸುವ ಪ್ರಕ್ರಿಯೆ ಮಾಡಬೇಕು. ರಾಜ್ಯದಲ್ಲಿ ಮುಂದೆ ಬಿಜೆಪಿ ಒಳ್ಳೆಯ ಭವಿಷ್ಯಯಿದೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here