ಮೈಸೂರು:- ಇಂದು ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ತೆರೆ ಬೀಳಲಿದ್ದು, ಮೈಸೂರಿನಲ್ಲಿ ದೋಸ್ತಿಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.
ಇನ್ನೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಆಗರ್ವಾಲ್ ಕೂಡ ಆಗಮಿಸಲಿದ್ದಾರೆ.
ಇನ್ನು, ದೋಸ್ತಿಗೂ ಮೊದಲೇ ನಿನ್ನೆ ಸಿಎಂ ತವರಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಮೊದಲು ಜನಾಂದೋಲನ ಸಭೆಯಲ್ಲಿ ಸಿಎಂ-ಡಿಸಿಎಂ ಅಬ್ಬರದ ಭಾಷಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಟಾರ್ಗಟ್ ಮಾಡಿ ತಿರುಗೇಟು ನೀಡಿದ್ದರು.
ಕುಮಾರಸ್ವಾಮಿ, ದೇವೇಗೌಡರು ಕೊಟ್ಟ ಮಾತಂತೆ ನಡೆಯೋರಲ್ಲ. ಬೇರೆಯವರು ಅಧಿಕಾರದಲ್ಲಿದ್ದರೆ ಗೌಡರು ಸಹಿಸಲ್ಲ. ಮೋದಿ ಪ್ರಧಾನಿ ಆದರೆ ದೇಶದಲ್ಲಿರಲ್ಲ ಅಂದಿದ್ದರು, ಎಚ್ಡಿಕೆ ನನ್ನ ಹೆಣದ ಮೇಲೆ ಸರ್ಕಾರ ಮಾಡ್ಬೇಕಂದರು. ಈಗ ಕೋಮುವಾದಿಗಳ ಜೊತೆ ಸೇರಿ ಷಡ್ಯಂತ್ರ ಮಾಡಿ ಸರ್ಕಾರ ದುರ್ಬಲಗೊಳಿಸಲು ದುಷ್ಟ ಪ್ರಯತ್ನ ಮಾಡಿದ್ದಾರೆ ಸಿಎಂ ವಾಗ್ದಾಳಿ ಮಾಡಿದ್ದರು.