ಕಲಬುರಗಿ: ಪುರಸಭೆ ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆ ಸಂದರ್ಭದಲ್ಲಿ ಪೊಲೀಸರೆದುರೇ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡಿರುವ ಘಟನೆ ಜೇವರ್ಗಿಯಲ್ಲಿ ನಡೆದಿದೆ.
23 ಸದಸ್ಯರ ಪುರಸಭೆಯಲ್ಲಿ 17 ಬಿಜೆಪಿ, 3 ಜೆಡಿಎಸ್, 3ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಕೊನೆಗಳಿಗೆಯಲ್ಲಿ 7ಕ್ಕೂ ಅಧಿಕ ಸದಸ್ಯರು ಬಿಜೆಪಿಗೆ ಕೈಕೊಟ್ಟು JDS ಗೆ ಬೆಂಬಲ ನೀಡಿದ್ದರಿಂದ ಜೆಡಿ ಎಸ್ ಪಕ್ಷ ಅಧಿಕಾರದ ಗದ್ದುಗೆ ಏರಿತು.
ಇದರಿಂದಾಗಿ ಜೆಡಿ ಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ಮಧ್ಯೆ ಗಲಾಟೆ ಉಂಟಾಗಿ ಪೊಲೀಸರ ಎದುರೇ ಹೊಡೆದಾಡಿಕೊಂಡಿದ್ದಾರೆ.
ಕೊನೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಜೇವರ್ಗಿ ಪುರಸಭೆ ಅಧ್ಯಕ್ಷರಾಗಿ ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಗಂಗೂಬಾಯ್ ಸತ್ಕಾರ್ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿದೆ.