ಮಡಿಕೇರಿ:- ಬಿಜೆಪಿ ಮುಖಂಡ CT ರವಿ ಒಬ್ಬ ಡ್ರಗ್ ಅಡಿಕ್ಟರ್ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿ.ಟಿ.ರವಿ ಒಬ್ಬ ಡ್ರಗ್ ಅಡಿಕ್ಟ್, ಇಡೀ ದೇಶದ ರಾಜಕಾರಣಿಗಳಲ್ಲಿ ಎಲ್ಲೂ ನೋಡುವ ಹಾಗೆ ಇಲ್ಲ, ಟಾಪ್ 10 ನಲ್ಲಿ ನಂ.1 ಸುಳ್ಳುಗಾರ ಅವರೇ ಬರುತ್ತಾರೆ ಎಂದರು.
ಸದನದಲ್ಲಿ ಒಬ್ಬ ಹೆಣ್ಣುಮಗಳಿಗೆ ಆಕ್ಷೇಪಾರ್ಹ ಸಂಭಾಷಣೆ ಮಾಡಿ, ನಾನು ಹಾಗೆ ಅಂದಿಲ್ಲ ಎಂದು ಸಿಟಿ ರವಿ ಹೇಳಿಕೊಳ್ಳುತ್ತಾರೆ. ಅಲ್ಲದೇ, ಕಾನೂನಾತ್ಮಕವಾಗಿ ಅರೆಸ್ಟ್ ಮಾಡಿದ್ದರೆ, ಅರೆಸ್ಟ್ ಮಾಡಿರುವುದನ್ನೇ ವಿಚಿತ್ರವಾಗಿ ಬಿಂಬಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಸಿಟಿ ರವಿ ಅವರಿಗೆ ನಾಚಿಕೆಯಾಗಬೇಕು. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಬಿಜೆಪಿ ಅವರು ಸಿಟಿ ರವಿ ಅವರನ್ನು ಸ್ವಾತಂತ್ರ‍್ಯ ಹೋರಾಟಗಾರ ಅನ್ನೋ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಬಿಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಮಹಜರು ಮಾಡಲು ಅವಕಾಶ ಕೊಡುತ್ತಿಲ್ಲ. ಇದು ಯಾಕೆ ಹೀಗೆ ಮಾಡುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ಅವರನ್ನು ಎದುರಿಸುವ ಕೆಲಸ ಮಾಡಿಸುತ್ತ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.