ಕಲಬುರಗಿ:- ಇಲ್ಲಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಮಾರಣಾಂತಿಕ ಹಲ್ಲೆ ಮಾಡಿ ನನ್ನ ಕೊಲೆಗೆ ಯತ್ನಿಸಿದ್ದಾರೆ ಅಂತ ರಕ್ತಸಿಕ್ತ ಗಾಯ ಸಮೇತ ಮಣಿಕಂಠ ರಾಠೋಡ್ ಶಹಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ರು.
Advertisement
ತನಿಖೆ ನಡೆಸಿದ ಪೋಲೀಸ್ರು ಅಪಘಾತ ಪ್ರಕರಣವನ್ನ ಹಲ್ಲೆ ಅಂತ ಬಿಂಬಿಸಿ ಮಣಿಕಂಠ ದೂರು ನೀಡಿದ್ರು ಅಂತ ನಿನ್ನೆ ಸ್ಪಷ್ಟಪಡಿಸಿದ್ರು. ಆದ್ರೆ ಪೋಲೀಸ್ ತನಿಖೆ ವಿರುದ್ಧ ಇವತ್ತು ಮಣಿಕಂಠ ಸುದ್ದಿ ಗೋಷ್ಠಿ ಕರೆದಿದ್ರು..ಆದ್ರೆ ಸುದ್ದಿಗೋಷ್ಠಿಗೂ ಮುನ್ನವೇ ಚೌಕ್ ಠಾಣೆ ಪೋಲೀಸ್ರು ಮನೆಗೆ ತೆರಳಿ ಮಣಿಕಂಠನನ್ನ ವಶಕ್ಕೆ ಪಡೆದ್ರು..