ಜೈಪುರ:- ರಾಜಸ್ಥಾನದ ಅಜ್ಮೀರ್‌ನಲ್ಲಿ ಬಿಜೆಪಿ ನಾಯಕನೊಬ್ಬ ಪ್ರೇಯಸಿಯ ಒತ್ತಡಕ್ಕೆ ಮಣಿದು ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಜರುಗಿದೆ.
ಬಂಧಿತ ಆರೋಪಿಗಳನ್ನು ಪತಿ ರೋಹಿತ್ ಸೈನಿ, ಆತನ ಪ್ರೇಯಸಿ ರಿತು ಎನ್ನಲಾಗಿದೆ. ಆ.10ರಂದು ರೋಹಿತ್ ಸೈನಿ ಪತ್ನಿ ಸಂಜು ಸೈನಿ ಅನುಮಾನಾಸ್ಪವಾಗಿ ಶವವಾಗಿ ಪತ್ತೆಯಾಗಿದ್ದರು. ಮೊದಲಿಗೆ ಆರೋಪಿ ರೋಹಿತ್, ದರೋಡೆಕೋರರು ಮನೆಗೆ ನುಗ್ಗಿ ತನ್ನ ಪತ್ನಿಯನ್ನು ಕೊಂದು ಬೆಲೆಬಾಳುವ ವಸ್ತುಗಳೊಂದಿಗೆ ದೋಚಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದ. ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಕೊಲೆಯ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ರೋಹಿತ್ ಮದುವೆಯಾಗಿದ್ದರೂ ರಿತು ಎಂಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಇವರಿಬ್ಬರ ಸಂಬಂಧಕ್ಕೆ ಪತ್ನಿ ಸಂಜು ಅಡ್ಡಿಯಾಗಿದ್ದಳು. ಹೀಗಾಗಿ ಪ್ರೇಯಸಿ ರಿತು ನಿನ್ನ ಪತ್ನಿ ಸಂಜುವನ್ನು ನಮ್ಮ ದಾರಿಯಿಂದ ತೆಗೆದು ಹಾಕು ಎಂದಿದ್ದಳು. ಪ್ರೇಯಸಿಯ ಒತ್ತಡಕ್ಕೆ ಮಣಿದು ರೋಹಿತ್, ಪತ್ನಿಯನ್ನೇ ಹತ್ಯೆಗೈದಿದ್ದ. ಆರೋಪಿ ರೋಹಿತ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.