ನವದೆಹಲಿ: ಬಿಜೆಪಿ ನಾಯಕರು ಸಂವಿಧಾನದ ಬಗ್ಗೆ ಮಾತನಾಡುವಷ್ಟು ಬದಲಾಗಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ವಿಶೇಷ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನೀವು ಸಾಮಾಜಿಕ ವಾದದ ಬಗ್ಗೆ ಮಾತನಾಡುತ್ತೀರಿ. ಐದು ಸಾವಿರ ವರ್ಷದಿಂದ ಮನುಸ್ಮೃತಿ ಮೂಲಕ ನೀವು ಹೇಗೆ ನಮಗೆ ತೊಂದರೆ ಕೊಟ್ಟಿದ್ದೀರಿ ಎಂದು ನಾವು ಹೇಳಬೇಕಾಗುತ್ತದೆ.
Advertisement
ಬಿಜೆಪಿ ನಾಯಕರು ಸಂವಿಧಾನದ ಬಗ್ಗೆ ಮಾತನಾಡುವಷ್ಟು ಬದಲಾಗಿದ್ದಾರೆ. ಈ ಬದಲಾವಣೆ ಯಾವಾಗ ಆಗಿದೆ ಗೊತ್ತಿಲ್ಲ. 2024ರ ಚುನಾವಣೆ ಬಳಿಕ ಆಯಿತಾ ಎನ್ನುವುದು ಗೊತ್ತಿಲ್ಲ. ದೇಶದ ಜನರು ಕನಿಷ್ಠ ಇವರು ಸಂವಿಧಾನದ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ. 1949ರಲ್ಲಿ ಆರ್‌ಎಸ್‌ಎಸ್ ನಾಯಕರು ಮನುಸ್ಮೃತಿ ಆಧರಿಸಿದ ಸಂವಿಧಾನ ಅಲ್ಲ ಎಂದು ವಿರೋಧ ಮಾಡಿದರು. ಇಂದಿಗೂ ಮನುಸ್ಮೃತಿ ಅವರ ಮನಸ್ಸಿನಲ್ಲಿದೆ ಎಂದು ಹೇಳಿದರು.