ಧ್ಯೇಯನಿಷ್ಠರಿಂದ ಮಾತ್ರ ದೇಶ ಸುರಕ್ಷಿತ : ಪಿ.ರಾಜೀವ

0
BJP membership campaign organizing meeting
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬುದ್ಧ, ಬಸವ, ವಿವೇಕಾನಂದ, ಮಹಾತ್ಮ ಗಾಂಧೀಜಿ, ನೇತಾಜಿ, ಅಂಬೇಡ್ಕರ್ ಇವರನ್ನೆಲ್ಲ ಜನ ಸ್ಮರಿಸುತ್ತಿರುವದು ಅವರ ಆಚಾರ-ವಿಚಾರ, ಶ್ರದ್ಧೆ, ಸೇವೆಯಿಂದಾಗಿ. ಹೀಗಾಗಿ ಧ್ಯೇಯನಿಷ್ಠರಿಂದ ಮಾತ್ರ ದೇಶ ಸದೃಢ ಹಾಗೂ ಸುರಕ್ಷಿತವಾಗಿರಲು ಸಾಧ್ಯ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.

Advertisement

ಅವರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸದಸ್ಯತಾ ಅಭಿಯಾನ, ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಬಿಜೆಪಿ ತತ್ವ-ಸಿದ್ಧಾಂತ ರಾಷ್ಟ್ರೀಯ ಧ್ಯೇಯಗಳನ್ನು ಹೊಂದಿದ್ದು, ಜಾತಿ, ಪ್ರದೇಶ, ಭಾಷೆ, ಕುಟುಂಬ ರಾಜಕಾರಣದಿಂದ ಹೊರತಾಗಿರುವ ಪಕ್ಷವಾಗಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಇದರ ಮಾಲಕನೇ ಎಂದು ಹೇಳಿದರು.

ಹಣ, ಜಾತಿ ಪ್ರಭಾವಗಳೇ ರಾಜಕೀಯವನ್ನು ಆಕ್ರಮಿಸಿಕೊಂಡಿದ್ದು, ರಾಜಕಾರಣ ತೀರಾ ಕಲುಷಿತಗೊಂಡಿದೆ. ಅದನ್ನು ಶುದ್ಧಗೊಳಿಸಬೇಕಾಗಿದೆ. ಹಣ ತೋಳಬಲ ಇಲ್ಲದವರೂ ಶಾಸಕ, ಸಂಸದ ಆಗಬಲ್ಲರು ಎಂಬುದನ್ನು ನಾವೆಲ್ಲ ತೋರಿಸಬೇಕಾಗಿದೆ. ಫಲಾಪೇಕ್ಷೆ ಇಲ್ಲದೇ ದುಡಿಯುವ ಕಾರ್ಯಕರ್ತರು, ದೇಶಕ್ಕಾಗಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಕೋಟ್ಯಾಂತರ ಜನರು ಬಿಜೆಪಿ ಜೊತೆ ಇದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಮಾತನಾಡಿದರು. ವೇದಿಕೆ ಮೇಲೆ ಅಭಿಯಾನದ ಜಿಲ್ಲಾ ಉಸ್ತುವಾರಿ ಪ್ರಶಾಂತ ಜಾಧವ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಕೆ. ಚವಾಣ್, ಪಕ್ಕೀರೇಶ ರಟ್ಟಿಹಳ್ಳಿ ಉಪಸ್ಥಿತರಿದ್ದರು.

ಮಂಡಲ ಅಧ್ಯಕ್ಷರಾದ ನಿಂಗಪ್ಪ ಮಣ್ಣೂರ, ಹೇಮಗಿರೀಶ್ ಹಾವಿನಾಳ, ಸುನೀಲ್ ಮಹಾಂತಶೆಟ್ಟರ್, ಮುತ್ತಣ್ಣ ಜಂಗಣ್ಣವರ, ರವಿ ಕರಿಗಾರ, ಅಜ್ಜನಗೌಡ ಪಾಟೀಲ ಮುಂತಾದವರು ಭಾಗವಹಿಸಿದ್ದರು. ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಜಿಲ್ಲೆಯ ಪಕ್ಷದ 9 ಮಂಡಲದ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಯಕರ್ತರು, ಪದಾಧಿಕಾರಿಗಳು, ಶಾಸಕರು, ಮಾಜಿ ಸಚಿವರು ಅಭಿಯಾನದಲ್ಲಿ ಪಾಲ್ಗೊಂಡಿದ್ದು, ದಾಖಲೆಯ ಸದಸ್ಯತ್ವವನ್ನು ಮಾಡಲಾಗುವದು. ಜಿಲ್ಲೆಯ 956 ಬೂತ್‌ಗಳಲ್ಲಿ ತಲಾ 300-400 ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.

 


Spread the love

LEAVE A REPLY

Please enter your comment!
Please enter your name here