ಡೆಂಗ್ಯೂ ಸೊಳ್ಳೆಗಿಂತ ಬಿಜೆಪಿ ಸೊಳ್ಳೆ ಹೆಚ್ಚು ಹರಡುತ್ತಿದೆ: ದಿನೇಶ್ ಗುಂಡೂರಾವ್ ವ್ಯಂಗ್ಯ

0
Spread the love

ದಾವಣಗೆರೆ: ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಕಮಿಟಿ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, ಎಲ್ಲಾ ಕಡೆ ಉತ್ಪತ್ತಿಯಾಗುವ ಲಾರ್ವ ಗಳನ್ನು ನಾಶ ಮಾಡುವ ಕೆಲಸ ಮಾಡುತ್ತೇವೆ. ಈಗಾಗಲೇ ಡೆಂಗ್ಯೂ ಪತ್ತೆಯಾಗುವ ಜಾಗದಲ್ಲಿ ಹೆಚ್ವು ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಖಾಸಗಿ ಲ್ಯಾಬ್ ಗಳಲ್ಲಿ ಡೆಂಗ್ಯೂ ಟೆಸ್ಟ್ ಗೆ 300 ರೂಪಾಯಿ ನಿಗದಿ ಮಾಡಲಾಗಿದೆ.

ಹೆಚ್ಚು ತೆಗೆದುಕೊಳ್ಳುವುದು ಕಂಡು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇನ್ನೂ ಸರ್ಕಾರ ಡೆಂಗ್ಯೂ ಬಗ್ಗೆ ಕ್ರಮ‌ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಡೆಂಗ್ಯೂ ಸೊಳ್ಳೆಗಿಂತ ಬಿಜೆಪಿ ಸೊಳ್ಳೆ ಹೆಚ್ಚು ಹರಡುತ್ತಿದೆ. ಆದ್ದರಿಂದ ಬಿಜೆಪಿ ಸೊಳ್ಳೆ ಡೇಂಜರ್ ಎಂದು ವ್ಯಂಗ್ಯವಾಡಿದರು.

ಅವರು ಕೂಡ ನಮಗೆ ಕೈಜೋಡಿಸಬೇಕು ಆಗ ಮಾತ್ರ ಡೆಂಗ್ಯೂ ಕಡಿಮೆ ಮಾಡಲು ಹೋರಾಟ ಮಾಡುತ್ತೇವೆ. ಹೈಕೋರ್ಟ್ ಕೇಳಿದ ವಿಚಾರಕ್ಕೆ ನಾವು ವರದಿಯನ್ನು ಕೊಡುತ್ತೇವೆ. ಪ್ರತಿ ಶುಕ್ರವಾರ ಎಲ್ಲಾ ಅಧಿಕಾರಿಗಳು ಡೆಂಗ್ಯೂ ನಿಯಂತ್ರಣಕ್ಕೆ ಕೈಜೊಡಿಸಬೇಕು ಎಂದು ಹೇಳಲಾಗಿದೆ. ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here