ವಿಜಯಸಾಕ್ಷಿ ಸುದ್ದಿ, ರೋಣ : ಬಿಜೆಪಿ ಪಕ್ಷದಿಂದ ಮಾತ್ರ ದೇಶದ ಪ್ರಗತಿ ಎನ್ನುವುದನ್ನು ನಾಗರಿಕ ಸಮುದಾಯ ಮರೆಯಬಾರದು ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ಹೇಳಿದರು.
ಅವರು ತಾಲೂಕಿನ ಮುದೇನಗುಡಿ ಹಾಗೂ ಕುರಹಟ್ಟಿ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಸದಸ್ಯತಾ ಅಭಿಯಾನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ಇಡೀ ವಿಶ್ವ ಇಂದು ಭಾರತವನ್ನು ನೋಡುತ್ತಿದೆ. ಭಾರತ ಇಂದು ಅಭಿವೃದ್ಧಿಯತ್ತ ಸಾಗುತ್ತಿರುವ ದೇಶವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಕಾರಣ, ಇಂದು ನರೇಂದ್ರ ಮೋದಿಯವರು ದೇಶದ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಅಂದಿನ ಶಾಸಕ ಕಳಕಪ್ಪ ಬಂಡಿಯವರು ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ತರುವ ಮೂಲಕ ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಜನರು ದೇಶದ ಮತ್ತು ನಾಡು-ನುಡಿಯ ರಕ್ಷಣೆಗಾಗಿ ಬಿಜೆಪಿ ಸದಸ್ಯತ್ವವನ್ನು ಪಡೆಯುವ ಮೂಲಕ ಬೆಂಬಲಿಸಬೇಕು ಎಂದರು.
ಶರಣಪ್ಪ ಪ್ಯಾಟಿ, ರಮೇಶ ವಕ್ಕರ, ಬಾಲಾಜಿರಾವ್ ಬೂಸ್ಲೆ, ರಾಜು ಚೆನ್ನಪ್ಪಗೌಡ್ರ, ಉಮೇಶ ಪಾಟೀಲ, ವಸಂತರಾವ್ ಉದ್ದಾರ, ಶಿವು ಮುದಿಬಸನಗೌಡ್ರ, ಎಸ್.ಜಿ. ಹಡಗಲಿ, ವಿರೇಶ ಬಿಲ್ದಡಗಿ, ಭರತ ಹುಬ್ಬಳ್ಳಿ, ವಿಶ್ವ ಕಾಡಶಿದ್ದೇಶ್ವರಮಠ, ಮಹಾಂತೇಶ ಅವರಾದಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.