ಬೆಂಗಳೂರು: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಬಳಿಕ ಮೌನಕ್ಕೆ ಶರಣಾಗಿದ್ದ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ರೆಬೆಲ್ ಆಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಕೇಂದ್ರದ ವೀಕ್ಷಕರಾದ ನಿರ್ಮಲಾ ಸೀತಾರಾಮನ್ ಮತ್ತು ದುಷ್ಯಂತ್ ಗೌತಮ್ ಕುಮಾರ್ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿವಾಸಕ್ಕೆ ತೆರಳಿ ಮಾತನಾಡಿದರು.
Advertisement
ನಾಯಕರು ತೆರಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, ಬಿಜೆಪಿ ಒಂದೇ ಒಂದು ಕುಟುಂಬದ ಪಕ್ಷ ಆಗಬಾರದು. ಚೇಲಾಗಳ ಮಾತು ಕೇಳಿ ಕ್ರಮ ತೆಗೆದುಕೊಳ್ಳಬಾರದು. ನಾನು ಯಾವುದೇ ಹಲ್ಕ ಕೆಲಸ ಮಾಡಿಲ್ಲ. ನನಗೆ ಯಾರ ಭಯ ಇಲ್ಲ. ನಾನು ಯಾವತ್ತೂ ಸತ್ಯದ ಪರ ಇದ್ದೇನೆ ಎಂದು ಹೇಳಿದರು.