ಬೆಂಗಳೂರು: ಬಿಜೆಪಿ ಅವರು ವಿಷಯವೇ ಇಲ್ಲದ್ದನ್ನ ವಿಷಯ ಮಾಡ್ತಿದ್ದಾರೆ. ಸುಮ್ಮನೆ ಮುಡಾ ವಿಷಯ ಇಟ್ಟುಕೊಂಡು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸದನದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ವಿಷಯವೇ ಇಲ್ಲದ್ದನ್ನ ವಿಷಯ ಮಾಡ್ತಿದ್ದಾರೆ.
ಸುಮ್ಮನೆ ಮುಡಾ ವಿಷಯ ಇಟ್ಟುಕೊಂಡು ಪ್ರತಿಭಟನೆ ಮಾಡ್ತಿದ್ದಾರೆ. ನಿಯಮಾವಳಿ ಪ್ರಕಾರವೇ ಸೈಟ್ ಪಡೆಯಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. ಮುಡಾ ಸೈಟ್ ಕೊಟ್ಟಾಗ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಅದರೂ ಈಗ ಪ್ರತಿಭಟನೆ ಮಾಡಿಸ್ತಿದ್ದಾರೆ ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಇನ್ನೂ ಮುಡಾ ಕೇಸ್ ತನಿಖೆಗೆ ನಿವೃತ್ತಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖೆ ಮಾಡೋವಾಗ ಚರ್ಚೆ ಮಾಡೋದು ಸರಿಯಲ್ಲ ಅಂತ ಸಭಾಪತಿ ರೂಲಿಂಗ್ ಅನ್ನ ಸಮರ್ಥನೆ ಮಾಡಿಕೊಂಡರು. ಸೈಟ್ ತೆಗೆದುಕೊಂಡಿರೋದ್ರಲ್ಲಿ ನನ್ನ ತಪ್ಪಿಲ್ಲ.
50:50 ನಿಯಮ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಜಮೀನಿಗೆ ಪರ್ಯಾಯವಾಗಿ ನಾವು ಸೈಟ್ ಕೇಳಿದಾಗ ಮುಡಾ ಸೈಟ್ ಕೊಟ್ಟಿದೆ. ನಾವು ಇದೇ ಜಾಗ ಕೊಡಿ ಅಂತ ನಾವು ಕೇಳಿರಲಿಲ್ಲ. ಅವರು ಕೊಟ್ಟರು, ನಾವು ತಗೊಂಡ್ವಿ ಅಂತ ತಿಳಿಸಿದರು.



