ವಿಜಯಪುರ:- ವಿಜಯೇಂದ್ರ ಇರೋ ತನಕ ಬಿಜೆಪಿ ಉದ್ಧಾರ ಆಗಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಡಮ್ಮಿ ಅಂತ ಬಿಜೆಪಿ ಹೈಕಮಾಂಡ್‌ಗೆ ಮನವರಿಕೆಯಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂದರು.
ವಿಳಂಬ ಮಾಡುತ್ತಿದ್ದಾರೆ ಎಂದರೆ ವಿಜಯೆಂದ್ರ ಬಿಜೆಪಿ ಅಧ್ಯಕ್ಷನಾಗೋದಿಲ್ಲ ಎಂದರ್ಥ. ಸೋಮಣ್ಣ ಅವರು ಬೇರೆ ಬೇರೆ ಕೆಲಸದ ನಿಮಿತ್ತ ಅಮಿತ್ ಶಾ ಅವರನ್ನು ಭೇಟಿಯಾಗಿರಬಹುದು. ಆದರೆ ಸೋಮಣ್ಣ ಕೂಡಾ ಬಿಜೆಪಿ ರಾಜಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದರು.
ಆ.2ರಂದು ವಿಜಯಪುರಕ್ಕೆ ಬಿಜೆಪಿ ವಿಭಾಗ ಮಟ್ಟದ ಕಾರ್ಯಕ್ರಮಕ್ಕೆ ವಿಜಯೇಂದ್ರ ಅವರು ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟ ಮೇಲೆ ವಿಜಯೆಂದ್ರ ವಿಜಯಪುರಕ್ಕೆ ಬರುತ್ತಿದ್ದಾನೆ. ನಾನು ಬಿಜೆಪಿಯಲ್ಲಿದ್ದಾಗ ವಿಜಯೇಂದ್ರನಿಗೆ ಇಲ್ಲಿ ಬರೋಕೆ ಧೈರ್ಯ ಇರಲಿಲ್ಲ ಎಂದು ಟಾಂಗ್ ಕೊಟ್ಟರು.
ಇನ್ನು ಸಭೆ ಮಾಡಲಿ, ಬಿಡಲಿ, ವಿಜಯೇಂದ್ರನಿಂದ ಬಿಜೆಪಿ ಉದ್ಧಾರ ಆಗಲ್ಲ. ವಿಜಯೇಂದ್ರ, ಯಡಿಯೂರಪ್ಪ ಯುಗ ಮುಗಿದಿದೆ. ಇಲ್ಲಿಗೆ ಬಂದು ಏನು ಮಾಡುತ್ತಾನೆ. ಸುಮ್ಮನೆ ಮಾಧ್ಯಮದವರು ಆತನನ್ನು ಹೈಲೆಟ್ ಮಾಡುತ್ತಿದ್ದಾರೆ ಎಂದರು.