ಬೆಂಗಳೂರು: ಬಿಜೆಪಿ ವಾಮ ಮಾರ್ಗದ ಮೂಲಕ ನಮ್ಮ ಸರ್ಕಾರ ಕೆಡವುವ ಕೆಲಸ ಮಾಡಲಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆಂಬ ಸಿಎಂ ಹೇಳಿಕೆ ವಿಚಾರ ಸತ್ಯ ಎಂದು ಹೇಳಿದರು. ಸಿಎಂ ಸತ್ಯವಾದ ಅಂಶನೇ ಹೇಳಿದ್ದಾರೆ. ವಾಮ ಮಾರ್ಗದ ಮೂಲಕ ಸರ್ಕಾರ ಕೆಡವುವ ಕೆಲಸ ಮಾಡ್ತಾರೆ.
136 ಶಾಸಕರಿರೋ ಸರ್ಕಾರವನ್ನ ಬೀಳಿಸುವ ನಡೆ ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಕಿಡಿಕಾರಿದರು. ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ರಾಜಣ್ಣ, ಅದು ಅವರವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯ ಸರ್ಕಾರ ಪತನ ಆಗುತ್ತೆ ಅಂತ ದೇವೇಗೌಡರು ಹೇಳ್ತಾರೆ ಅವರನ್ನ ಪ್ರಶ್ನೆ ಯಾಕೆ ಮಾಡಲ್ಲ ಎಂದು ಮರು ಪ್ರಶ್ನಿಸಿದರು.



