ಬಿಜೆಪಿ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲದಯಲ್ಲಿ ಗದಗ ನಗರ ಮಂಡಲ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಯುವ ಮೋರ್ಚಾ ಅಧ್ಯಕ್ಷ ನವೀನ ಕೊಟೆಕಲ್ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಮಾತನಾಡಿ, ಪಕ್ಷದ ಸಂಘಟನೆಗೆ ಯುವ ಮೋರ್ಚಾ ಹಾಗೂ ಯುವಕರ ಶ್ರಮ, ಶಕ್ತಿ ಬಹಳ ಅವಶ್ಯಕ. ಪಕ್ಷ ಕೊಟ್ಟ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ಯುವ ಮೋರ್ಚಾ ಕಾರ್ಯಕರ್ತರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಸದಾ ನನ್ನ ಕಚೇರಿಗೆ ಭೇಟಿ ನೀಡಿ ತಿಳಿಸಬಹುದು ಎಂದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಪಕ್ಷ ಕೊಟ್ಟ ಯಾವುದೇ ಕೆಲಸಗಳನ್ನು ಮತ್ತು ಹೋರಾಟಗಳಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.

ಈ ಸಂದರ್ಭದಲ್ಲಿ ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಹಿರಿಯರಾದ ಜಗನ್ನಾಥಸಾ ಭಾಂಡಗೆ, ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಶಿವು ಹಿರೇಮನಿಪಾಟೀಲ, ವೆಂಕಟೇಶ ಹಬೀಬ, ಧರ್ಮರಾಜ ಕೊಂಚಿಗೇರಿ, ಕೃಷ್ಣಾ ಚಿಂತಾ, ಶ್ರೀಕಾಂತ ಆದೇಪ್ಪನವರ, ಪ್ರವೀಣ ಹಡಪದ, ಆಕಾಶ ಪಾಟೀಲ, ಮೋಹನ ವರವಿ, ಚಂದ್ರಶೇಖರ ಒಂಟಿತ್ತಿನವರ, ಕಾರ್ತಿಕ ಶಿಗ್ಲಿಮಠ, ವಿನಾಯಕ ಕಾಟ್ವಾ, ವಿನಾಯಕ ಹೊರಕೇರಿ, ಕಿರಣಕುಮಾರ ಕುರ್ತಕೋಟಿ, ಆನಂದ ಗದಗೇರಿ, ಬಸವರಾಜ ಮಡಿವಾಳರ ಮುಂತಾದವರಿದ್ದರು. ಗದಗ ನಗರ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ನರೆಗಲ್ ಸ್ವಾಗತಿಸಿದರು, ವಿರೇಶಪ್ರಭು ಗದಗಿನ ವಂದಿಸಿದರು.


Spread the love

LEAVE A REPLY

Please enter your comment!
Please enter your name here