ಬೆಂಗಳೂರು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ‘ವೋಟ್ ಚೋರಿ’ ಆರೋಪದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಕೊಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ವೋಟ್ ಕಳ್ಳತನ ಆಗಿದೆ ಅಂತ ಪ್ರೂವ್ ಮಾಡಿದ್ದಾರೆ. ಇಡೀ ದೇಶದಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಬಿಜೆಪಿ ಅವರು ಉತ್ತರ ಕೊಡಬೇಕು ಒತ್ತಾಯಿಸಿದ್ದಾರೆ.
ಬಿಜೆಪಿ ಅವರು ಮೌನವಾಗಿ ಇದ್ದಾರೆ ಅಂದರೆ ಕಳ್ಳತನ ಆಗಿದೆ ಅಂತ ಅರ್ಥ. ಮೋದಿ, ಅಮಿತ್ ಶಾ ಯಾಕೆ ಹೇಳಿಕೆ ಕೊಡ್ತಿಲ್ಲ? ಚುನಾವಣೆ ಆಯೋಗ ಯಾಕೆ ಉತ್ತರ ಕೊಡಬೇಕು? ದೇಶ ಆಳೋರು ಉತ್ತರ ಕೊಡಬೇಕು. ಇವರ ವರ್ತನೆ ನೋಡಿದ್ರೆ ಮತ ಚೋರಿ ಆಗಿರೋದು ಸತ್ಯ ಆಗಿದೆ. ಬಿಜೆಪಿ ಅವರು ಕಳ್ಳತನ ಮಾಡಿನೇ ಹಿಂದೆಲ್ಲಾ ಸರ್ಕಾರ ಮಾಡಿರೋದು ಅಂತ ಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.