ಗದಗ: ಕಪ್ಪತ ಗುಡ್ಡದ ಅಂಚಿನ ಗುಡ್ಡಕ್ಕೆ ಬೆಂಕಿ ಬಿದ್ದು, ಗುಡ್ಡದ ಒಂದು ಭಾಗ ಸುಟ್ಟು ಕರಕಲಾದ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದ ಬಳಿ ನಡೆದಿದೆ.
Advertisement
ಗ್ರಾಮದ ಜನತಾ ಪ್ಲಾಟ್ ಗೆ ಹೊಂದಿಕೊಂಡೇ ಇರೋ ಗುಡ್ಡವಾಗಿದ್ದು, ಅಪಾರ ಪ್ರಮಾಣದ ಹುಲ್ಲು ಹಾಗೂ ಸಣ್ಣ ಸಸ್ಯಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಬೆಂಕಿಯಿಂದಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.