ಬೆಂಗಳೂರು:- ಬ್ಲ್ಯಾಕ್ ಮೇಲ್ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಲವರ್ ದೂರಿಗೆ ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ವರುಣ್, ನಾನು ಒಬ್ಬರಿಗೆ ಜೀವ ಬೆದರಿಕೆ ಹಾಕಿದೆ. ಬ್ಲ್ಯಾಕ್ ಮೇಲ್ ಮಾಡ್ತಿದ್ದೇನೆ ಎಂದೆಲ್ಲಾ ಸುದ್ದಿಗಳು ಹಬ್ಬಿದೆ. ಆದ್ರೆ ಇದೆಲ್ಲಾ ನಿಜವಲ್ಲ ಅಸಲಿ ಕಥೆ ಬೇರೆ ಇದೆ ಎಂದು ಹೇಳಿದ್ದಾರೆ.
ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ, ಯಾರ ವಿಡಿಯೋ ಫೋಟೋಗಳನ್ನು ಹಿಡಿದುಕೊಂಡು ನಾನು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ವರುಣ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೊ ವಿಡಿಯೋ ಶೇರ್ ಮಾಡಿ ವರುಣ್, ನನ್ನ ವಿರುದ್ಧ ಹರಿದಾಡ್ತಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.
ನನ್ನ ಹಾಗೂ ಅವರ ವಿಡಿಯೋಗಳನ್ನು ಫ್ಯಾನ್ಸ್ ಪೇಜ್ಗಳು ಶೇರ್ ಮಾಡ್ತಿದ್ರು. ನನ್ನ ಅಕೌಂಟ್ನಲ್ಲಿರುವ ವಿಡಿಯೋ, ಫೋಟೋಗಳ ಡಿಲೀಟ್ಗೆ ಸಂಬಂಧಿಸಿದ ವಿಚಾರ ಇದು. ಪೊಲೀಸ ಮುಂದೆ ಎಲ್ಲಾ ವಿಚಾರ ನಿರ್ಧಾರ ಆಗಿದೆ. ಸಮಸ್ಯೆ ಕೂಡ ಬಗೆಹರಿದಿದೆ. ನಾನು ಚೆನ್ನಾಗಿದ್ದೇನೆ, ಅವರು ಚೆನ್ನಾಗಿದ್ದಾರೆ. ನಾನು ಜೈಲಿಗೆ ಹೋಗಿಲ್ಲ. ಮನೆಯಲ್ಲೇ ಇದ್ದೇನೆ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ನಟ ವರುಣ್ ಆರಾಧ್ಯ ಕೇಳಿಕೊಂಡಿದ್ದಾರೆ.
ಇತ್ತ ವರ್ಷಾ ಕೂಡ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇದೆಲ್ಲಾ ಕಟ್ಟು ಕಥೆ, ಶುದ್ಧ ಸುಳ್ಳು ಎಂದಿದ್ದಾರೆ.