ಬೆಂಗಳೂರು:- ಕಾಂಗ್ರೆಸ್ ಮುಖಂಡನಿಗೆ ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಹಿನ್ನೆಲೆ ರಾಜಕಾರಣಿಯೋರ್ವನ ವಿರುದ್ದ ಎಫ್ಐಆರ್ ದಾಖಲಾಗಿದೆ.
ಎಸ್, ವಿಡಿಯೋ ರಿಲೀಸ್ ಮಾಡ್ತಿನಿ ಎಂದು ಕಾಂಗ್ರೆಸ್ ಮುಖಂಡ ಸಿದ್ದೇಗೌಡಗೆ ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಸ್ಥಳೀಯ ರಾಜಕಾರಣಿ ಧನಂಜಯ್ ಎಂಬುವವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನನ್ನ ತಂಟೆಗೆ ಬಂದರೆ ಚುನಾವಣೆ ಸಂದರ್ಭದಲ್ಲಿ ನಿನ್ನ ಮಕ್ಕಳ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು. ಧನಂಜಯ್ ಬೆದರಿಕೆಗೆ ಸಿದ್ದೇಗೌಡ ಪತ್ನಿ ಯಶೋಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅವರ ದೂರಿನನ್ವಯ ಇದೀಗ ಎಫ್ಐಆರ್ ದಾಖಲಾಗಿದೆ.
ಧನಂಜಯ್ ಬ್ಲ್ಯಾಕ್ಮೇಲ್ ಮಾಡಿದ್ದಲ್ಲದೇ ಸಿದ್ದೇಗೌಡನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತನ್ನ ತಂಟೆಗೆ ಬಾರದಂತೆ ಅವಾಜ್ ಹಾಕಿದ್ದ. ತನ್ನ ಸಹವಾಸಕ್ಕೆ ಬಂದರೆ ನಿನ್ನ ಮಕ್ಕಳನ್ನ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ. ಈ ಹಿನ್ನಲೆ ಯಶೋಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇದೀಗ ಎಫ್ಐಆರ್ ದಾಖಲಾಗಿದೆ.



