HomePolitics Newsನಿಮ್ಮ ಮನೆ ಮಗಳನ್ನು ಆಶೀರ್ವದಿಸಿ : ಸುನಂದಾ ಕರಿಯಪ್ಪ ಶಿರಹಟ್ಟಿ

ನಿಮ್ಮ ಮನೆ ಮಗಳನ್ನು ಆಶೀರ್ವದಿಸಿ : ಸುನಂದಾ ಕರಿಯಪ್ಪ ಶಿರಹಟ್ಟಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ, ಸಂವಿಧಾನದ ಆಶಯಕ್ಕೆ ಬದ್ಧಳಾಗಿ, ನಿಮ್ಮ ಮನೆ ಮಗಳಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಮ್ಮೆಲ್ಲರ ಆಶೀರ್ವಾದ ನೀಡಿ ನನ್ನನ್ನು ಆಯ್ಕೆ ಮಾಡಿ ಎಂದು ಸಮಾಜ ಸೇವಕಿ ಸುನಂದಾ ಕರಿಯಪ್ಪ ಶಿರಹಟ್ಟಿ ಮನವಿ ಮಾಡಿದರು.

ಅವರು ಪಟ್ಟಣದಲ್ಲಿ ಗುರುವಾರ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿ, ಸುಮಾರು 15-20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪತಿ ಕರಿಯಪ್ಪ ಶಿರಹಟ್ಟಿ ಅವರಿಗೆ ಬೆನ್ನೆಲುಬಾಗಿ ಈ ಭಾಗದಲ್ಲಿ ನಿರ್ಗತಿಕರು, ಭಿಕ್ಷುಕರ ಸೇವೆಯನ್ನು ಮಾಡಿಕೊಂಡು ಬರುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ. ಸಮಾಜ ಸೇವೆಯ ಮೂಲಕ ಎಲ್ಲರೊಂದಿಗೆ ಗುರುತಿಸಿಕೊಂಡಿರುವ ನಾವು ಕ್ಷೇತ್ರದವರೇ ಆಗಿರುವದರಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಇನ್ನೂ ಹೆಚ್ಚಿನ ಸೇವೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದು, ಎಲ್ಲರೂ ಆಶೀರ್ವಾದ ಮಾಡಿ ಮತಗಳನ್ನು ನೀಡಲು ಮನವಿ ಮಾಡುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ, ನಿರ್ಗತಿಕರು, ಭಿಕ್ಷುಕರ, ನೊಂದವರ ಸೇವೆಯ ಮೂಲಕ ಹೆಸರು ಮಾಡಿರುವ ಕರಿಯಪ್ಪ ಶಿರಹಟ್ಟಿ ಮತ್ತಿತತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!