ಗುರು-ಹಿರಿಯರಿಗೆ ವಿಧೇಯರಾಗಿರಿ

0
banashankari
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಕೆಂಚಲಾಪೂರ ಓಣಿಯಲ್ಲಿನ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾಮಹೋತ್ಸವದ ಅಂಗವಾಗಿ ಜರುಗಿದ ನೂತನ ರಥೋತ್ಸವವನ್ನು ಶನಿವಾರ ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ನೆರವೇರಿಸಿದರು.

Advertisement

ಬಳಿಕ ಧರ್ಮಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಜಾತ್ರೆ-ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ-ಹರಿದಿನಗಳು ಪರಸ್ಪರರಲ್ಲಿ ಸ್ನೇಹ, ಸೌಹಾರ್ದತೆ ಬೆಸೆಯುವ ಜತೆಗೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತವೆ. ಹಿರಿಯರ ಕಾಲದಿಂದಲೂ ಅರ್ಥಪೂರ್ಣವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯಗಳು ಮುಂದುವರೆಯಬೇಕು. ಜನರಿಗೆ ಶಾಂತಿ-ನೆಮ್ಮದಿ ಕರುಣಿಸುವ, ಸನ್ಮಾರ್ಗ ತೋರುವ ದೇವಸ್ಥಾನಗಳಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಂಸ್ಕಾರ, ಸಂಸ್ಕೃತಿ, ಗುರು-ಹಿರಿಯರಿಗೆ ವಿಧೇಯರಾಗಿ ನಡೆಯಬೇಕು. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಹೀಗಾಗಿ, ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.

mangalarati

೫ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡ ದೇವಸ್ಥಾನಕ್ಕೆ ೭೫ ಲಕ್ಷ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣಗೊಂಡಿದ್ದು, ೩ ದಿನಗಳಿಂದ ಜಾತ್ರಾಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಈ ವೇಳೆ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಹಾಬಳೇಶ್ವರಪ್ಪ ಬೇವಿನಮರದ, ಬನಶಂಕರಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗಾರ್ಗಿ, ಲಕ್ಷ್ಮಣ ಮೆಡ್ಲೇರಿ, ಸುನೀಲ ಮಹಾಂತಶೆಟ್ಟರ, ಈಶ್ವರ ಮೆಡ್ಲೇರಿ, ಗಣೇಶ ಬೇವಿನಮರದ ಸೇರಿ ಹಿರಿಯರು, ಭಕ್ತರು ಇದ್ದರು.
bhaktaruಗುರುವಾರ ಕಳಸಾರೋಹಣ, ಶುಕ್ರವಾರ ಹೋಮ-ಹವನ, ಪೂಜಾ ಕೈಂಕರ್ಯಗಳು, ಶನಿವಾರ ಶ್ರೀ ದೇವಿಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ನೆರವೇರಿತು. ಮಂಜುನಾಥ ಬೇವಿನಮರದ ದಂಪತಿಗಳಿಂದ ೧೦೦೮ ಮಹಿಳೆಯರಿಗೆ ಉಡಿ ತುಂಬುವುದು ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಸಂಜೆ ರಥೋತ್ಸವ ಬಳಿಕ ಧರ್ಮಸಭೆ ನಡೆಯಿತು.


Spread the love

LEAVE A REPLY

Please enter your comment!
Please enter your name here