ವಿಜಯಸಾಕ್ಷಿ ಸುದ್ದಿ, ಗದಗ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ಗದಗ ಜಿಲ್ಲೆಗೆ ರಾಜ್ಯ ಸಮಿತಿ ಸದಸ್ಯ ರಿಯಾಜ ಕಡಂಬು ಹಾಗೂ ಜಿಲ್ಲಾ ಉಸ್ತುವಾರಿ ರಮಜಾನ ಕಡಿವಾಲ ಭೇಟಿ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಸ್ವಾಗತಿಸಿ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಐಎಂಎ ಸಂಸ್ಥೆಯ ಅಧ್ಯಕ್ಷ ಪವಾಡಶೆಟ್ಟರ, ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಡಾ. ಸಾಮುದ್ರಿ, ಐಎಂಎ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ವೈದ್ಯ ಪ್ಯಾರಅಲಿ ನೂರಾನಿ, ಹಿರಿಯ ವಕೀಲ ಎಂ.ಎಂ. ಕುಕನೂರ್, ಎಂ.ಎಂ. ಮೌಲ್ವಿ, ಅಂಜುಮನ್ ಇಸ್ಲಾಂ ಪಾಲಿಟೆಕ್ನಿಕ್ ಚೇರಮನ್ ಜಾಕೀರ್ ಮುಜಾವರ್, ಮುಸ್ಲಿಂ ಸಮಾಜದ ಉಲೇಮಾ (ಮುಫ್ತಿ)ಗಳಾದ ಮೊಹಮ್ಮದ್ ಸಿದ್ದಿಕ್ ಕಾಸ್ಮಿ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ ವಂದಿಸಿದರು. ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಕಾರ್ಯದರ್ಶಿ ಇರ್ಫಾನ್ ಗುಳಗುಂದಿ, ಖಜಾಂಚಿ ಮುಜಾಹಿದ್ ಕಣಕೇನ್ನವರ, ಅನ್ವರ್ ಮುಲ್ಲಾ, ಮುಸ್ತಾಕ್ ಹೊಸಮನಿ, ಹಸ್ಸನ್ ನಾಗನೂರ್,ಇಬ್ರಾಹಿಂ, ಇಸ್ಮಾಯಿಲ್ ಅಣ್ಣಿಗೇರಿ ಪಾಲ್ಗೊಂಡಿದ್ದರು.