ಆರೋಗ್ಯದತ್ತ ಹೆಚ್ಚು ಗಮನ ಕೊಡಿ : ಸಿಕಂದರ ಮೀರಾನಾಯಕ

0
Blood Donation Camp as part of World Blood Donor Day
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ವೆಂಕಾಟಾಪೂರ ಗ್ರಾಮದ ಯುವಕರು ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನವನ್ನು ಮಾಡುವುದರ ಮೂಲಕ ಹಲವಾರು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತಿರುವುದು ಪ್ರಶಂಸನೀಯ ಎಂದು ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸಂಸ್ಥೆಯ ಸಿಇಒ ಸಿಕಂದರ ಮೀರಾನಾಯಕ ಹೇಳಿದರು.

Advertisement

ಡಂಬಳ ಹೋಬಳಿಯ ವೆಂಕಟಾಪೂರ ಗ್ರಾಮದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಅನ್ನದಾನೀಶ್ವರ ಮಠದ ಆವರಣದಲ್ಲಿ ಎಸ್‌ಬಿಐ ಫೌಂಡೇಶನ್ ಮತ್ತು ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಂಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಆರೋಗ್ಯದಿಂದ ಇದ್ದಾಗ ಮಾತ್ರ ಏನಾದರೂ ಸಾಧಿಸಬಲ್ಲ. ಆದರೆ ಇಂದಿನ ಬದುಕಿನಲ್ಲಿ ಆರೋಗ್ಯದತ್ತ ಗಮನಕೊಡುವದನ್ನೇ ಮರೆಯುತ್ತಿದ್ದಾನೆ. ಇದರ ಪರಿಣಾಮವಾಗಿ ಹಲವಾರು ಕಾಯಿಲೆಗಳು ಕಾಡತೊಡಗಿವೆ. ಇದರಿಂದ ಹೋರಬರಬೇಕಾದರೆ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕಾಗಿದೆ ಎಂದರು.

ವೈದ್ಯರಾದ ಡಾ.ದತ್ತಾತ್ರೇಯ ವೈಕುಂಠ ಮಾತನಾಡಿ, ಭಾರತದಲ್ಲಿ ಪ್ರತಿ 2 ಸೆಂಕೆಡಿಗೆ ಒಬ್ಬರಿಗೆ ರಕ್ತದ ಅಗತ್ಯ ಉಂಟಾಗುತ್ತದೆ. ಪ್ರತಿ ವರ್ಷ ಸರಾಸರಿ 5 ಕೋಟಿ ಯುನಿಟ್‌ಗೂ ಹೆಚ್ಚು ರಕ್ತ ಬೇಕಾಗುತ್ತದೆ. ಆದರೆ ಸಂಗ್ರಹವಾಗುವುದು 2.5ಕೋಟಿ ಯುನಿಟ್ ಮಾತ್ರ. ಹೀಗಾಗಿ, ಯುವಕರು ರಕ್ತದಾನ ಮಾಡಲು ಮುಂದಾಗಬೇಕಾಗಿದೆ ಎಂದು ಹೇಳಿದರು.

ವೆಂಕಟಾಪೂರ ಗ್ರಾಮದ 25ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡುವುದರ ಮೂಲಕ ವಿಶ್ವ ರಕ್ತದಾನಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಹಳ್ಳಿ, ಹಣಮಂತಪ್ಪ ಮರಿಗೌಡ್ರ, ಕುಬೇರಪ್ಪ ಬಿಸನಳ್ಳಿ, ಬಸವರಾಜ ತುಪ್ಪದ, ಭೀಮಪ್ಪ ಸಂಶಿ, ಬಸವರಾಜ ಎಸ್, ಮಂಜುನಾಥ ಕೆ, ವಿರುಪಾಕ್ಷಪ್ಪ, ಕಲ್ಲಪ್ಪ ಎಸ್.ಕೆ, ಹುಸೇನಸಾಬ ಎನ್, ಗೋಣೆಪ್ಪ ಟಿ, ಸಂಗಪ್ಪ ಎ, ಮುತ್ತಪ್ಪ ಬಿ, ಶಿವಕುಮಾರ, ಪಾರಪ್ಪಾ ಕೆ, ವಿರುಪಾಕ್ಷಗೌಡ, ಸರಣಪ್ಪ, ಕುಬೇರಪ್ಪ, ಶಿಕಂದರ, ಮುತ್ತಪ್ಪ ಆರ್, ಮಂಜುನಾಥ, ಶಿವಾನಂದ, ಸಿದ್ಧಪ್ಪ, ಶರಣಪ್ಪ, ವಿ.ಎಸ್. ಅರಕಸಾಲಿ, ಬಸವರಾಜ, ಮಂಜಪ್ಪ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here