ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಪ್ರತಿಷ್ಠೀತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಅಂಜುಮನ್-ಎ- ಇಸ್ಲಾಂ ಪಾಲಿಟೆಕ್ನಿಕ್‌ನಲ್ಲಿ ಐ.ಎಮ್.ಎ, ರಕ್ತ ಭಂಡಾರ ಗದಗ ಮತ್ತು ಅಂಜುಮನ್-ಎ-ಇಸ್ಲಾಂ ಪಾಲಿಟೆಕ್ನಿಕ್‌ನ ವಿಶೇಷ ಎನ.ಎಸ್.ಎಸ್. ಶಿಬಿರದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ರಕ್ತದಾನದಿಂದ ಆಗುವ ಲಾಭಗಳನ್ನು ಗದುಗಿನ ಖ್ಯಾತ ವೈದ್ಯರಾದ ಡಾ. ಪವಾಡ ಶೆಟ್ಟರ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎನ್. ರೇವಣಕರ ವಹಿಸಿದ್ದರು. ಆರ್.ಸಿ. ಕೋಟಿ, ಎಲ್.ಎಸ್. ಪಾಟೀಲ್, ಜೆ.ಎಸ್. ಕುಕನೂರ, ತಬಸ್ಸುಮ ಸವಣೂರ, ಎಮ್.ಜಿ. ವಾಯ್ ಮುಲ್ಲಾ, ಎಸ್.ಎಮ್. ಬಿಜಾಪೂರ, ಎಂ.ಜೆ. ಹೀರೆಹಾಳ, ಜಾಕೀರ ತಂಬಾಕದ, ಐ.ಎಮ್.ಎ ರಕ್ತ ಭಂಡಾರ ಸಿಬ್ಬಂದಿಗಳಾದ ಕಿರಣಕುಮಾರ ಬಾರಕೇರ, ಅನಿಲ್ ಕುಮಾರ, ಇಸ್ಮಾಯಿಲ್, ಅಕ್ಷತಾ, ಸಾಹೀಲ್ ಮುಲ್ಲಾ, ರಾಘವೇಂದ್ರ, ಶರಣು ಉಪಸ್ಥತಿರಿದ್ದರು.
ಎನ್‌ಎಸ್‌ಎಸ್ ಶಿಬಿರದ ನಿರ್ದೇಶಕರಾದ ಕುಮಾರಸ್ವಾಮಿ ಹಿರೇಮಠ, ಶಿಬಿರಾಧಿಕಾರಿಗಳಾದ ಆರ್.ಎಸ್. ಲಾಯದಗುಂದಿ, ಸಹ ಶಿಬಿರಾಧಿಕಾರಿ ಜಹೀರ ಕಮಾನಗಾರ, ಜಿ.ಎನ್. ಕಬಾಡಿ ಮುಂತಾದವರಿದ್ದರು.