ಗಜಾನನೋತ್ಸವ ಸಮಿತಿಯಿಂದ ರಕ್ತದಾನ ಶಿಬಿರ

0
Blood Donation Camp by Gajananotsava Samiti
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಶ್ರೀ ಪಂ.ಪಂಚಾಕ್ಷರಿ ಗವಾಯಿಗಳ ಮಾರುಕಟ್ಟೆಯಲ್ಲಿ ದಲಾಲ ವರ್ತಕರ ಸಂಘ, ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಐ.ಎಂ.ಎ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಕಾರ್ಯಕ್ರಮ ಜರುಗಿತು.

Advertisement

50ಕ್ಕೂ ಹೆಚ್ಚು ಜನ ಯುವಕರು ರಕ್ತದಾನ ಮಾಡಿದರು. ಐ.ಎಂ.ಎ ಬ್ಲಡ್ ಬ್ಯಾಂಕ್‌ನ ಸಿಬ್ಬಂದಿಗಳು ರಕ್ತದಾನದ ಮಹತ್ವದ ಬಗ್ಗೆ ಯುವಕರಿಗೆ ತಿಳಿಸಿಸುತ್ತ, ಒಬ್ಬ ವ್ಯಕ್ತಿಯ ರಕ್ತದಾನದಿಂದ ನಾಲ್ಕು ಜೀವಗಳನ್ನು ಉಳಿಸಬಹುದು.

ರಕ್ತದಾನದಿಂದ ನಿಮ್ಮ ಆರೋಗ್ಯ ವೃದ್ಧಿಯಾಗಲಿದೆ ಎಂದು ತಿಳಿಸಿದರು. ಐ.ಎಂ.ಎ. ಬ್ಲಡ್ ಬ್ಯಾಂಕ್ ಸಿಬ್ಬಂದಿಗಳಾದ ನಿತ್ಯಾನಂದ ಕೊಡಬಳಿ, ಇಸ್ಮಾಯಿಲ್ ಚಿಲಕವಾಡ, ಅನಿಲ ಭಜಂತ್ರಿ, ಅಕ್ಷತಾ ಅಣ್ಣಿಗೇರಿ, ಸಾಹಿಲ್ ಮುಲ್ಲಾ ರಕ್ತ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮಣ್ಣ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ ವಾರಕರ, ಕಾರ್ಯದರ್ಶಿ ರಾಜಶೇಖರ ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ಸಹ ಖಜಾಂಚಿ ನೀತಿಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ಗುಂಡಪ್ಪನವರ, ವಿನಯ ಕಾಡಪ್ಪನವರ, ಸಾಗರ ವಜ್ರೇಶ್ವರಿ, ಮುತ್ತಣ್ಣ ಅಂಗಡಿ, ಅಜೀತ ಪುಣೇಕರ, ಶಾಮದಾಸ ಪುಣೇಕರ, ತಾತನಗೌಡ ಪಾಟೀಲ, ಮಂಜುನಾಥ ಕವಲೂರ, ಬಸವರಾಜ ಅಂಗಡಿ ಸೇರಿದಂತೆದಲಾಲ ವರ್ತಕರ ಸಂಘದ ಹಾಗೂ ಖರೀದಿದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here