ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಗುರುವಾರ ನಾಗಾವಿ ಗ್ರಾಮದ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಜರುಗಿತು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ವಿಕಸಿತ ಭಾರತ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿಯಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ನಗರಗಳ ಅಭಿವೃದ್ಧಿಗೆ 2016ರಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಘೋಷಣೆ ಮಾಡಿ, ಆಯ್ಕೆಯಾದ ಎಲ್ಲ ನಗರಗಳಿಗೆ 150 ಕೋಟಿ ರೂ. ಅನುದಾನ ನೀಡಿ ಪ್ರಧಾನಿ ನರೇಂದ್ರ ಮೋದಿಯವರು ಸೌಕರ್ಯ ಕಲ್ಪಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದಗ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಪ್ರಮುಖರಾದ ಜಗದೀಶ ಚಿಂಚಲಿ, ರಾಜು ಕುಲಕರ್ಣಿ, ಮಹೇಶ ಕಮ್ಮಾರ, ರಾಜು ಗುಡಸಲಿಮನಿ, ಮಂಜು ಶಿರಹಟ್ಟಿ, ಭಾಗಪ್ಪ ವಗ್ಗರ, ಚನ್ನಬಸಪ್ಪ ಮಡಿವಾಳರ, ಶೇಖಣ್ಣ ಕಟ್ಟಿಮನಿ, ಶಿವಪ್ಪ ಹೊಂಬಳ, ನಾಗೇಶ ಕಮತರ, ಈಶ್ವರಪ್ಪ ಗೊಲಪ್ಪನವರ, ಮುತ್ತು ಹೊಂಬಳ, ಅಲ್ಲಾಸಾಬ ಪಿರಕಣ್ಣವರ, ಕಾಳು ತೋಟದ, ನೇಮಪ್ಪ ಮಾಳಗಿಮನಿ, ನಾಗೇಶ ತೋಟದ, ಬಸವರಾಜ ಬಾರಕೇರ, ಶ್ರೀಶೈಲಪ್ಪ ಹೊಂಬಳ, ಶ್ರೀಶೈಲಪ್ಪ ಹುಬ್ಬಳ್ಳಿಯವರ, ಶರಣಯ್ಯ ಸಂಗನಾಳಮಠ, ಬಸಪ್ಪ ಹಡಗಲಿ, ಬಸಪ್ಪ ಹಳ್ಳಿಕೇರಿ, ತಿಪ್ಪಣ್ಣ ಅಕ್ಕಿ, ಮಂಜು ಬಳಿಗಾರ, ಬಸಲಿಂಗಯ್ಯ ಸಾಸೊಳಿಮಠ, ನೇಮಪ್ಪ ಲಮಾಣಿ, ಚೇತರ ಕರೂರ, ಸುರೇಶ್ ಬಸೆಟ್ಟಿ, ರಮೇಶ್ ಸಜ್ಜಗಾರ, ರವಿ ಮಾನ್ವಿ, ಬಸವೇಶ್ವರ ಭಜನಾ ಸಂಘ, ಗಂಗಾಧರ ಯುವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿರಿಯರಾದ ಬಿ.ಎಸ್. ಚಿಂಚಲಿ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇದೊಂದು ಐತಿಹಾಸಿಕ ಯುಗವಾಗಿದೆ. ಅವರು ಭಾರತ ದೇಶದ ಬೆನ್ನೆಲುಬಾಗಿ ದೇಶದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here