ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಸತ್ಯಸಾಯಿಬಾಬಾರವರ 99ನೇ ವರ್ಷದ ಸ್ಮರಣಾರ್ಥ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಗದಗ ಜಿಲ್ಲಾ ಹುಲಕೋಟಿ ಸಮಿತಿಯು ಐಎಂಎ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
Advertisement
ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಹಿಟೆನ್ ಪ್ರಾ. ಲಿಮಿಟೆಡ್ ಮತ್ತು ಸಿಬ್ಬಂದಿಯಿಂದ ಶ್ರೀ ಸಾಯಿಕುಮಾರ್ ಅವರಿಗೆ ವಿಶೇಷ ಮೆಚ್ಚುಗೆಯನ್ನು ಸಲ್ಲಿಸಲಾಯಿತು. ದೇಣಿಗೆ ಅಭಿಯಾನವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಶ್ರೀ ಗುರುಜಾಜ್ ಓದುಗೌಡರ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆರ್‌ಎಮ್‌ಎಸ್‌ಎಸ್ ಅಧ್ಯಕ್ಷ ಡಾ. ಎಸ್. ನಾಗನೂರು, ದಾಸ್ ರೆಡ್ಡಿ, ಬ್ಲಡ್ ಬ್ಯಾಂಕ್ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಕಾರ್ಯದರ್ಶಿ ಡಾ. ಅವಿನಾಶ ಓದುಗೌಡರ್, ಪಿಆರ್‌ಓ ಡಾ. ಪ್ಯಾರಅಲಿ ನೂರಾನಿ, ಹಿರಿಯ ಅಧಿಕಾರಿ ಡಾ. ಪವಾಡಶೆಟ್ಟರ ಮತ್ತು ವಿನಾಯಕ ಓದುಗೌಡರ ಉಪಸ್ಥಿತರಿದ್ದರು.