ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್, ದೈವಜ್ಞ ಸಮಾಜದ ಸಹಕಾರದೊಂದಿಗೆ ಗದುಗಿನ ಹಳೇ ಸರಾಫ್ ಬಜಾರ್‌ನಲ್ಲಿರುವ ದೈವಜ್ಞ ಸಮಾಜದ ಕಾರ್ಯಾಲಯದಲ್ಲಿ ರಕ್ತ ಗುಂಪು ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
100ಕ್ಕೂ ಹೆಚ್ಚು ಜನರ ರಕ್ತ ತಪಾಸಣೆ ಮಾಡಲಾಯಿತು. ರಕ್ತದಾನಕ್ಕೆ ಮುಂದಾಗಿದ್ದ 20ಕ್ಕೂ ಹೆಚ್ಚು ಜನರಲ್ಲಿ ಹೆಮೋಗ್ಲೋಬಿನ್ ಕಡಿಮೆ ಇದ್ದುದರಿಂದ ಹೆಮೋಗ್ಲೋಬಿನ್ ಸುಧಾರಣೆಯ ಬಳಿಕ ಮುಂದಿನ ಶಿಬಿರದಲ್ಲಿ ರಕ್ತದಾನ ಮಾಡುವಂತೆ ಸಲಹೆ ನೀಡಲಾಯಿತು. 26 ಜನರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಕೋಶಾಧ್ಯಕ್ಷ ರೇಣುಕಪ್ರಸಾದ ಹಿರೇಮಠ, ಲಯನ್ ಲೇಡಿಸ್ ಕ್ಲಬ್ ಅಧ್ಯಕ್ಷೆ ಪೂಜಾ ಪಾಟೀಲ, ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಕೋಶಾಧ್ಯಕ್ಷೆ ಸಹನಾ ಹಿರೇಮಠ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ರಮೇಶ ಶಿಗ್ಲಿ, ಪ್ರವೀಣ ವಾರಕರ, ಎಸ್.ಕೆ. ಶೆಟ್ಟರ, ನಿತೀಶ್ ಸಾಲಿ, ಅರವಿಂದ ಪಟೇಲ್, ರಘು ಮೇಹರವಾಡೆ, ಎಸ್.ಡಿ. ಪಾಟೀಲ, ಮಂಜುನಾಥ ವೀರಲಿಂಗಯ್ಯನಮಠ, ರಾಹುಲ್ ಅರಳಿ, ರತನ್ ದೇಸಾಯಿ, ಕಾರ್ತಿಕ ಪಾಲನಕರ, ವೀರೇಶ ಪಟ್ಟಣಶೆಟ್ಟಿ, ವೀಣಾ ಸುಲಾಖೆ, ಸಾವಿತ್ರಿ ಶಿಗ್ಲಿ, ಮಧು ವೀರಲಿಂಗಯ್ಯನಮಠ, ಅಪರ್ಣಾ ತೋಟದ, ಅಮೃತಾ ವಾರಕರ, ರೂಪಾ ಉತ್ತರಕರ, ಅಶ್ವಿನಿ ನೀಲಗುಂದ ಮುಂತಾದವರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.